ಬೀಜ ವಿತರಣಾ ಕೇಂದ್ರದಿಂದ ಬೀಜ ಖರೀದಿಸಿ: ಶಾಸಕ ಓಲೇಕಾರ

ಹಾವೇರಿ: ಅಧಿಕೃತವಾಗಿ ರಿಯಾಯತಿ ದರದಲ್ಲಿ ದೊರಕುವ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ಅಥವಾ ಕೃಷಿ ಇಲಾಖೆಯ ಸಹಯೋಗದೊಂದಿಗೆ ಬಿತ್ತನೆ ಬೀಜ ವಿತರಿಸುತ್ತಿರುವ ಸಹಕಾರಿ ಸಂಘಗಳಲ್ಲಿ ಬಿತ್ತನೆ ಬೀಜಗಳನ್ನು ಪಡೆದು ಬಿತ್ತನೆ ಮಾಡಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.

ತಾಲ್ಲೂಕಿನ ಕರ್ಜಗಿ ಹೋಬಳಿಯ ಉಪಬೀಜ ಮಾರಾಟ ಕೇಂದ್ರವಾದ ಕಾಟೇನಹಳ್ಳಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2019-20 ನೇ ಸಾಲಿನ ಮುಂಗಾರು ಹಂಗಾಮಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮಕ್ಕೆ  ಇತ್ತೀಚೆಗೆ ಅವರು ಚಾಲನೆ ನೀಡಿ ಮಾತನಾಡಿದರು.

    ರೈತರು ಬಿತ್ತನೇ ಬೀಜ ಪಡೆಯುವಾಗ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದರಿದುತ್ತಿದ್ದಾರೆ. ಸಕಾಲದಲ್ಲಿ ಮಳೆಯಾಗಿ ರೈತರು ಬೆಳೆದ ಬೆಳೆಯಿಂದ ಉತ್ತಮ ಇಳುವರಿ ಪಡೆದು ಆಥರ್ಿಕವಾಗಿ ಸದೃಡರಾಗಬೇಕೆಂದು ಹೇಳಿದರು.    ಸಹಾಯಕ ಕೃಷಿ ನಿದರ್ೇಶಕ ಕರಿಯಲ್ಲಪ್ಪ ಡಿ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಬೇಕಾಗುವಷ್ಟು ರಸಗೊಬ್ಬರದ ದಾಸ್ತಾನು ಇದ್ದು ಯಾವುದೇ ರೀತಿ ರಸಗೊಬ್ಬರದ  ಕೊರತೆ ಇರುವುದಿಲ್ಲ. ತಾಲ್ಲೂಕಿನಲ್ಲಿ ಒಟ್ಟು 16 ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಅದರಲ್ಲಿ ಮೂರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಇನ್ನೂಳಿದ 13 ಉಪ ಕೇಂದ್ರಗಳನ್ನು ತೆರೆದು ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ಕೆ.ಎಮ್.ಎಪ್ ಅಧ್ಯಕ್ಷ ಬಸವರಾಜ ಅರಬಗೊಂಡ ಅವರು ಮಾತನಾಡಿ,  ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸುವ ಕಾರ್ಯ ಕೃಷಿ ಇಲಾಖೆಯು ಅಚ್ಚುಕಟ್ಟಾಗಿ ಮಾಡುತ್ತಿದೆ. ರೈತರಿಗೆ ಸ್ಥಳಿಯವಾಗಿ ಬೀಜ ಸಿಗುವ ಸೌಲಭ್ಯವನ್ನು ಕಾಟೇನಹಳ್ಳಿಯಲ್ಲಿ ಒದಗಿಸಿರುವುದು ತುಂಬಾ ಸಂತೋಷವೆನಿಸಿದೆ ಮತ್ತು ರೈತರು ತಾಳ್ಮೆಯಿಂದ ಬಿತ್ತನೆ ಬೀಜವನ್ನು ಪಡೆಯಬೇಕೆಂದು ಹೇಳಿದರು.

    ಎಚ್ ಡಿ ಅಂಗರಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆ.ಸಿ.ಸಿ ಬ್ಯಾಂಕ್ ನಿದರ್ೇಶಕ  ಮುತ್ತಣ್ಣಾ ಕಂಚಾರಗಟ್ಟಿ, ಸಹಕಾರಿ ಸಂಘದ ಸದಸ್ಯರು ಹಾಗೂ ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದಶರ್ಿ ಬಸವರಾಜ ಹಾದಿಮನಿ, ತಾ.ಪಂ.ಮಾಜಿ ಸದಸ್ಯ  ಎ.ಎನ್ ಹರನಗೇರಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಮನಗೌಡ ಮುದಿಗೌಡ್ರ, ಸಹಕಾರಿ ಸಂಘದ ಉಪಾದ್ಯಕ್ಷ ಗಣೇಶ ಗುತ್ತಿ, ಸಂಘದ ಸದಸ್ಯರಾದ ವೀರಭದ್ರಪ್ಪ ಬಳಿಗಾರ, ವೀರಭದ್ರಪ್ಪ ಗಾಣಗೇರ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚನ್ನಬಸಪ್ಪ ಕಳ್ಳಿಹಾಳ ಹಾಗೂ ಎಲ್ಲ ಸಂಘದ ಸದಸ್ಯರು ಮತ್ತು ರೈತ ಬಾಂಧವರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.