ಲೋಕದರ್ಶನವರದಿ
ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯಕ್ಕೆ ಕೆಎಸ್ಆರ್ಟಿಸಿ ಸಂಸ್ಥೆಯ ಬಸ್ ಸೇವೆ ಆರಂಭಗೊಂಡಿತು.
ಪ್ರಾಚಾರ್ಯ ಪ್ರೊ| ಶಂಕರ ಅರಬಳ್ಳಿ ಮಾತನಾಡಿ, ಬಸ್ ಸೌಲಭ್ಯವಿಲ್ಲದೆ ಕಾಲೇಜಿಗೆ ಬರುವ ವಿದ್ಯಾಥಿಗಳಿಗೆ ತೊಂದರೆಯಾಗಿತ್ತು. ಆದರೆ ಈಗ ಬಸ್ ಸಂಚಾರ ಆರಂಭಗೊಂಡಿದ್ದರಿಂದ ವಿದ್ಯಾಥರ್ಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಬನಹಟ್ಟಿ ಮದನಮಟ್ಟಿಯಲ್ಲಿನಿರ್ಮಾಣ ಗೊಂಡ ಸರ್ಕಾರಿ ಪ್ರಥಮ ದರ್ಜಿ ಮಹಾವಿದ್ಯಾಲಯಕ್ಕೆ ಕೆಎಸ್ಆರ್ಟಿಸಿ ಸಂಸ್ಥೆ ತನ್ನ ಬಸ್ ಸೇವೆ ಆರಂಭಿಸಿತು.
ಬನಹಟ್ಟಿ ಬಸ್ ನಿಲ್ದಾಣದಿಂದ ಬಸ್ ಬೆಳಗ್ಗೆ 9 ಮತ್ತು 9.45 ನಿಮಿಷಕ್ಕೆ ಕಾಲೇಜಿಗೆ ಹೋಗುತ್ತದೆ. ಮಧ್ಯಾಹ್ನ 3 ಮತ್ತು 4.45ಕ್ಕೆ ಮತ್ತೆ ಬರುತ್ತದೆ. ಬಸ್ ಸೇವೆ ಆರಂಭಿಸಲು ಶಾಸಕ ಸಿದ್ಧು ಸವದಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ಸೌಲಭ್ಯ ಒದಗಿಸಿದ್ದಾರೆ ಎಂದು ಪ್ರೊ| ಅರಬಳ್ಳಿ ಹೇಳಿದರು.