ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಲೋಕದರ್ಶನವರದಿ

ಹಾವೇರಿ09: ಸಮರ್ಪಕ ಬಸ್ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮದ ಶಾಲಾ-ಕಾಲೇಜು ವಿದ್ಯಾಥರ್ಿಗಳು ಸೋಮವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.  

       ತಾಲೂಕಿನ ಕಳ್ಳಿಹಾಳ ಬಳಿ ನಿತ್ಯ ಹಾವೇರಿಯಿಂದ ಕಳ್ಳಿಹಾಳ, ಕಾಟೇನಹಳ್ಳಿ, ಹನುಮನಹಳ್ಳಿ ಮಾರ್ಗವಾಗಿ ಕನವಳ್ಳಿ ಕಡೆ ಸಂಚರಿಸುವ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು. 

       ಈ ಮಾರ್ಗದಲ್ಲಿ ಸಂಚರಿಸುವ ಕನವಳ್ಳಿ ಬಸ್ ಮತ್ತು ಕೂರಗುಂದ ಬಸ್ಗಳನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಪರ ಊರುಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಕೆಲ ಕಾಲ ಪರದಾಡಿ ಖಾಸಗಿ ವಾಹನಗಳ ಮೂಲಕ ತೆರಳಬೇಕಾಯಿತು. 

         ಪ್ರತಿದಿನ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾಥರ್ಿಗಳು ಸಮರ್ಪಕ ಬಸ್ ಸೌಲಭ್ಯ ಇಲ್ಲದ ಕಾರಣ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ. ಬಸ್ಸಿನಲ್ಲಿ ಬೆ.6-30, 9- 00, 10-30, ಮ.1-15, 3-15, ಸಂ.4-50, 6-30 ವೇಳೆಯ ಬಸ್ಸಿನಲ್ಲಿ ಕುರಿ ಹಿಂಡಿನಂತೆ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. 

        ಪ್ರತಿದಿನ ಊರು- ಕೇರೆಗಳಿಗೆ, ವ್ಯಾಪಾರ ಮತ್ತು ಉದ್ಯೋಗಕ್ಕಾಗಿ ತೆರಳಲು ನೌಕರರು ಸಾರಿಗೆ ಸಂಸ್ಥೆಯ ಬಸ್ಗಳನ್ನೆ? ಅವಲಂಬಿಸಿದ್ದಾರೆ.

 ಸಾರ್ವಜನಿಕರೂ ಕೂಡ ವೇಳೆಗೆ ಸರಿಯಾಗಿ ಬಸ್ ಇಲ್ಲದೆ ಪ್ರತಿದಿನ ಗೋಳಾಡುವಂತಾಗಿದೆ, ಎಂದು ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಹಾವೇರಿ ಸಾರಿಗೆ ಘಟಕದ ಅಧಿಕಾರಿಗಳ ವಿರುದ್ಧ ಆಕ್ರೊ?ಶ ವ್ಯಕ್ತಪಡಿಸಿ ಸುಮಾರು ಎರಡು ಘಂಟೆಗಳ ಕಾಲ ಪ್ರತಿಭಟನೆ ಮಾಡಿದರು.  

       ನಂತರ ಸ್ಥಳಕ್ಕೆ ಆಗಮಿಸಿದ ಹಾವೇರಿ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ ಆರ್ ನಾಯಕ್ ಅವರು ಸಮಸ್ಯೆಯನ್ನು ಪರಿಹರಿಸಿ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಹೆಚ್ಚುವರಿಯಾಗಿ ಬಸ್ಸುಗಳನ್ನು ಬಿಡಲಾಗುವುದು ಎಂದು ಭರವಸೆ ನೀಡಿದರು.  

       ಇದೇ ವೇಳೆಯಲ್ಲಿ ವಿದ್ಯಾಥರ್ಿಗಳಾದ ಬಸವರಾಜ ಕರಿಯಪ್ಪನವರ, ವೀರೇಶ ಅಗಡಿ, ಮೈಲಾರಿ ತೋಟಗೆರ, ರಮೇಶ ಕೋರಿ ನಾಗರಾಜ ಗೋಣೆಮ್ಮನವರ, ಶರಣ ಬ್ಯಾಡಗಿ, ಬಸವರಾಜ ಗುಡಗೂರ ಸೇರಿದಂತೆ ಅನೇಕ ವಿದ್ಯಾಥರ್ಿಗಳು, ವಿದ್ಯಾಥರ್ಿನಿಯರು ಹಾಗೂ ಗ್ರಾಮಸ್ಥರು ಇದ್ದರು.