ಬಸ್ ಪಾಸ್ ಕೇವಲ ಸಕರ್ಾರಿ ಶಾಲಾ, ಕಾಲೇಜು ವಿದ್ಯಾಥರ್ಿಗಳಿಗೆ ಮಾತ್ರ

ಕೈ-ಜೆಡಿಎಸ್ ಮೈತ್ರಿ: ಸಿದ್ದು
   ರಾಮನಗರ/ಹುಬ್ಬಳ್ಳಿ: ಸಕರ್ಾರಿ ಶಾಲಾ, ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. 
ಸೋಮವಾರ ರಾಮನಗರ ಜಿಲ್ಲೆಯ ಚೆನ್ನಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಲಕ್ಷಾಂತರ ರೂಪಾಯಿ ಡೊನೇಶನ್ ಕೊಟ್ಟು ಖಾಸಗಿ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ನ ಅಗತ್ಯವಿಲ್ಲ ಎಂದರು. 
ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟು ಉಚಿತ ಬಸ್ ಪಾಸ್ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು. 
ಮಾಧ್ಯದಮವರ ವಿರುದ್ಧವೂ ಕಿಡಿಕಾರಿದ ಕುಮಾರಸ್ವಾಮಿ, ಟಿವಿ ವಾಹಿನಿಗಳು ಚಿಕ್ಕ ಘಟನೆಯನ್ನೇ ಮುಂದಿಟ್ಟುಕೊಂಡು ನನ್ನ ಹಣಿಯುತ್ತಿವೆ. ನಿಮಗೆ ಪತ್ರಿಕಾ ಧರ್ಮ ಇದೆಯೇ ಎಂದು ಪ್ರಶ್ನಿಸಿದರು.