ಜಿಲ್ಲಾಮಟ್ಟದಲ್ಲಿ ಉಚಿತವಾಗಿ ಪ್ರವಾಸ ಮಾಡಲು ಬಸ್ ಪಾಸ್ : ಹೇಮಂತ್ ನಿಂಬಾಳ್ಕರ್

Bus pass for free travel at district level: Hemant Nimbalkar

ಜಿಲ್ಲಾಮಟ್ಟದಲ್ಲಿ ಉಚಿತವಾಗಿ ಪ್ರವಾಸ ಮಾಡಲು ಬಸ್ ಪಾಸ್ : ಹೇಮಂತ್ ನಿಂಬಾಳ್ಕರ್ 

ಸಿರುಗುಪ್ಪ  15: 2025 ಹೊಸ ವರ್ಷದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲಾಗುವುದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ಪ್ರಕಟಿಸಿದ್ದಾರೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಮಾಜಿ ಉಪಾಧ್ಯಕ್ಷರು ಹಿರಿಯ ಪತ್ರಕರ್ತರಾದ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆಗೆ ಚಾಲನೆಗೆ ಕೊಡಿಸಲಾಗುವುದು ಗ್ರಾಮೀಣ ಬಸ್ ಪಾಸ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಣೆ ಮಾಡಿರುವುದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸತತ ಸಭೆಗಳಾಗಿದ್ದು ತಾಲೂಕ ಮಟ್ಟದಲ್ಲಿರುವ ಪತ್ರಕರ್ತರಿಗೂ ಈ ಯೋಜನೆ ತಲುಪಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕ್ರಮ ಕೈಗೊಂಡಿದೆ ಎಂದು ಅಬ್ದುಲ್ ನಬಿ ಅವರು ತಿಳಿಸಿದ್ದಾರೆ. 

 ಬಸ್ ಪಾಸ್ ಗಾಗಿಯೇ ಸಾಫ್ಟ್‌ ವೇರ್ ಅಭಿವೃದ್ಧಿ ಪಡಿಸಲಾಗಿದೆ ಸೇವಾ ಸಿಂಧುವಿನಲ್ಲಿ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಪತ್ರಕರ್ತರು ವಾರ್ತಾ ಇಲಾಖೆಗೆ ಅರ್ಜಿ ಸಲ್ಲಿಸಬೇಕಿಲ್ಲ ಬಸ್ ಪಾಸ್ ಗಾಗಿಯೇ ರಾಜ್ಯಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಆಯಾ ಜಿಲ್ಲಾಮಟ್ಟದಲ್ಲಿ ಉಚಿತವಾಗಿ ಪ್ರವಾಸ ಮಾಡಲು ಬಸ್ ಪಾಸ್ ಅನ್ನು ಜಿಲ್ಲಾ ಮಟ್ಟದಲ್ಲಿಯೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಮಂತ್ ನಿಂಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ ಕೆಲ ಕಠಿಣ ನಿಯಮಾವಳಿ ಸರಳಿಕರಣ ಮಾಡಬೇಕು ಎಂದು ಕೆ ಯು ಡಬ್ಲ್ಯೂ ಜೆ ಸಲ್ಲಿಸಿರುವ ಮನವಿ ಪರೀಶೀಲನೆ ಮಾಡಿ ಸೂಕ್ತ ಕ್ರಮ ವಹಿಸಲಾಗುವುದು ಹೇಮಂತ್ ನಿಂಬಾಳ್ಕರ್ ಭರವಸೆ ನೀಡಿದ್ದಾರೆಂದು ಅಬ್ದುಲ್ ನಬಿ ಯವರು ತಿಳಿಸಿದರು.