ಮಾಸ್ಕೋ, ಜೂ 26, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ನೀತಿ ವಿರೋಧಿಸಿ ಅವರ ಅಧಿಕೃತ ನಿವಾಸದ ಮುಂದೆ ಅಪರಿಚಿತ ಶಂಕಿತನೊಬ್ಬ ಪ್ರಯಾಣಿಕರಿದ್ದ ಬಸ್‌ಗೆ ಬೆಂಕಿ ಹಚ್ಚಿದ್ದಾನೆ ಎಂದು ಮಿಲಿಟರಿ ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಜಿ 1 ನ್ಯೂಸ್ ಪೋರ್ಟಲ್ ಪ್ರಕಾರ, ಶಂಕಿತನು ಬಸ್ಸಿನಲ್ಲಿ ಗ್ಯಾಸೋಲಿನ್ ಚೆಲ್ಲಿ, ಬೆಂಕಿ ಹಚ್ಚಿ, ನಂತರ ಹೊರಗೆ ಹೋಗಿ, "ಡೌನ್ ವಿಥ್ ಬೋಲ್ಸನಾರೊ!" ಎಂದು ಘೋಷಣೆ ಕೂಗಿದ್ದಾನೆ. ಈ ಘಟನೆ ರಾಷ್ಟ್ರ ರಾಜಧಾನಿ ಬ್ರೆಸಿಲಿಯಾದಲ್ಲಿರುವ ಬ್ರೆಜಿಲ್ ಅಧ್ಯಕ್ಷರ ಅಧಿಕೃತ ಕಾರ್ಯಸ್ಥಳವಾದ ಪ್ಲಾನಟೊ ಅರಮನೆಯ ಮುಂದೆ ನಡೆದಿದೆ. ಈತನನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಭಾಗಶಃ ಸುಟ್ಟುಹೋಗಿದ್ದ ಬಸ್‌ನ ಬೆಂಕಿ ನಂದಿಸಿದ್ದಾರೆ. ಬಸ್‌ನಲ್ಲಿ 10 ಪ್ರಯಾಣಿಕರಿದ್ದು, ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ವರದಿ ತಿಳಿಸಿದೆ.