ಬೈಲಹೊಂಗಲ 03: ತಾಲೂಕಿನ ಸುತಗಟ್ಟಿ ಕ್ರಾಸ್ ಬಳಿ ಬಸ್ವೊಂದು ಪಲ್ಟಿಯಾದ ಪರಿಣಾಮ ಐದು ಜನರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಸಿಂದಗಿ ಕೆಎಸ್ಆರ್ಟಿಸಿ ಡಿಪೋಗೆ ಸೇರಿದ ಸಿಂದಗಿ- ಪಣಜಿ ಬಸ್ ಬೆಳಗಾವಿ ಮಾರ್ಗವಾಗಿ ಪಣಜಿಗೆ ಶನಿವಾರ ರಾತ್ರಿ ಹೊರಟಿತ್ತು. ಸುತಗಟ್ಟಿ ಕ್ರಾಸ್ ಬಳಿ ಎದುರಿಗೆ ಎರಡು ಲಾರಿಗಳ ಚಾಲಕರು ಬಸ್ನ್ನು ಓವರ್ಟೇಕ್ ಮಾಡಲು ಪ್ರಯತ್ನಿಸಿದ್ದರಿಂದ ಬಸ್ ಚಾಲಕ ರಸ್ತೆ ಪಕ್ಕ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ರಸ್ತೆ ಪಕ್ಕ ಪಲ್ಟಿಯಾಯಿತೆಂದು ಬಸ್ ಕಂಡಕ್ಟರ್ ತಿಳಿಸಿದರು.
ಗಾಯಗೊಂಡ ಐದು ಜನರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರವಿವಾರ ಕ್ರೇನ್ ಮೂಲಕ ರಸ್ತೆ ಪಲ್ಟಿಯಾಗಿ ಬಿದ್ದ ಬಸ್ನ್ನು ಮೇಲಕ್ಕೆಬ್ಬಿಸಿದ ಸಾರಿಗೆ ನಿಗಮ ಸಿಬ್ಬಂದಿ, ಪೋಲಿಸರು ಸಂಚಾರ ಸುಗಮಗೊಳಿಸಿದರು. ಈ ಕುರಿತು ನೇಸರಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.