ಗಡಿನಾಡು-ಹೊರನಾಡು ಕನ್ನಡಿಗರ ಜ್ವಲಂತ ಸಮಸ್ಯೆಗಳ, ಗಡಿನಾಡು ವಿದ್ಯಾರ್ಥಿಗಳ ಕನ್ನಡ ಮಾಧ್ಯಮ ಪ್ರಶಸ್ತಿ ಹಾಗೂ ಶಿಷ್ಯವೇತನ ಬಿಡುಗಡೆ ಮಾಡಲು ಒತ್ತಾಯ

ಗಡಿನಾಡು-ಹೊರನಾಡು ಕನ್ನಡಿಗರ ಜ್ವಲಂತ ಸಮಸ್ಯೆಗಳ, ಗಡಿನಾಡು ವಿದ್ಯಾರ್ಥಿಗಳ ಕನ್ನಡ ಮಾಧ್ಯಮ ಪ್ರಶಸ್ತಿ ಹಾಗೂ ಶಿಷ್ಯವೇತನ ಬಿಡುಗಡೆ ಮಾಡಲು ಒತ್ತಾಯ Burning issues of border-foreign Kannadigas, demand to release Kannada medium awards and scholarship

ಲೋಕದರ್ಶನ ವರದಿ 

         ಬೆಂಗಳೂರು  15: ಹೊರನಾಡು ಕನ್ನಡಿಗರಿಗೆ ಒಳನಾಡಿನ ಅಭ್ಯರ್ಥಿಗಳ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಬೇಕು ಹಾಗೂ ಗಡಿನಾಡು ಹಾಗೂ ಹೊರನಾಡು ಕನ್ನಡಿಗರ ಜ್ವಲಂತ ಸಮಸ್ಯೆಗಳ ಬಗ್ಗೆ ಕ್ರಮಕೈಗೊಳ್ಳಬೇಕು, ಕನ್ನಡ ಅಭೀವೃದ್ದಿ ಪ್ರಾಧಿಕಾರದ ಯೋಜನೆಯಾದ ಗಡಿನಾಡು ಕನ್ನಡ ವಿದ್ಯಾರ್ಥಿಗಳ “ಕನ್ನಡ ಮಾಧ್ಯಮ ಪ್ರಶಸ್ತಿ” ಹಾಗೂ ಶಿಷ್ಯವೇತನ ಬಿಡುಗಡೆ ಮಾಡಲು ಹೊರನಾಡು ಕನ್ನಡಿಗರ ಹೊರಾಟ ಸಮಿತಿ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ. ಕ್ರಮಕೈಗೊಳ್ಳದಿದರೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಾವಂತರಿಗೆ ಆರ್ಥಿಕವಾಗಿ ಪ್ರಯೋಜನೆಯಾಗಿರುವ ಯೋಜನೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೋ ಪುರುಷೋತ್ತಮ ಬಿಳಿಮಲೆಯವರ ಇಚ್ಚಾಶಕ್ತಿ ಕೊರತೆ ಮತ್ತು ನಿರ್ಲಕ್ಷದಿಂದ ಈ ಯೋಜನೆಯನ್ನು ನಿಲ್ಲಿಸಿದ್ದಾರೆ.  

ದೇಶದಲ್ಲಿ ಭಾಷಾವಾರು ಪ್ರಾಂತ ರಚನೆಯಾದ ನಂತರ ಅನೇಕ ಗಡಿ ರಾಜ್ಯಗಳಲ್ಲಿ ಅನೇಕ ಕನ್ನಡಿಗರು ತಮ್ಮ ಉಪಜೀವನಕ್ಕಾಗಿ ಆಂಧ್ರ​‍್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳನಾಡು, ಗೋವಾ ಹೀಗೆ ಅನೇಕ ರಾಜ್ಯಗಳಲ್ಲಿ ಕನ್ನಡಿಗರು ವಾಸಿಸುತ್ತಿರುವುದು ತಮ್ಮ ಗಮನದಲ್ಲಿದು. ಕನ್ನಡ ಅಭೀವೃದ್ದಿ ಪ್ರಾಧಿಕಾರದ ಯೋಜನೆಯಾದ ಗಡಿನಾಡು ಕನ್ನಡ ವಿದ್ಯಾರ್ಥಿಗಳ ಮಾಧ್ಯಮ ಪ್ರಶಸ್ತಿ ಹಾಗೂ ಶಿಷ್ಯವೇತನ ಬಿಡುಗಡೆ ಮಾಡಲು ಒತ್ತಾಯ 2011-12ರಲ್ಲಿ ಆರಂಭವಾದ ಯೋಜನೆ 2022-23ರಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರ ರದ್ದು ಮಾಡಿದೆ ಸರ್ಕಾರ ಈ ಯೋಜನೆಯನ್ನು ಶೀಘ್ರವೇ ಆರಂಭ ಮಾಡಿ ಶಿಷ್ಯ ವೇತನ ನೀಡಿದರೆ ಬಡಕುಟುಂಬದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಷ್ಯಕ್ಕೆ ಅನುಕೂಲವಾಗಲಿದೆ. ಗಡಿ ಭಾಗದಲ್ಲಿ ಮಕ್ಕಳು ಕನ್ನಡ ಮಾಧ್ಯಮಕ್ಕೆ ಒಲವು ತೊರಲು ಈ ಯೋಜನೆ ಎಷ್ಟೋಂದು ಪರಿಣಾಮಕಾರಿಯಾಗಿದೆ.

        ದಯವಿಟ್ಟು ಈ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ಶೀಘ್ರವೇ ಆರಂಭಿಸಬೇಕಾಗಿ ಮನವಿ.  ಹೀಗಾಗಿ ನಮ್ಮ ಹೊರ ನಾಡು ಕನ್ನಡಿಗರ ಪರವಾಗಿ ತೆಲಂಗಾಣ ರಾಜ್ಯದ ಗಡಿ ಭಾಗವಾದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆ ಇರುವ ಕಾರಾಮುಂಗಿ, ಶಿಖರಖಾನ, ಗಡಿಗಾವ, ಓಧತಪೂರ, ಎಸಗಿ, ಶಾಹಾಪುರ, ಮೋರಗಿ, ಗೊಂದೆಗಾಂವ, ರತ್ನಾಪೂರ ಗ್ರಾಮಗಳಲ್ಲಿ  ಒಟ್ಟು 485 ಜನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದನ್ನು ತಮ್ಮ ಜಿಲ್ಲಾಡಳಿತ ವತಿಯಿಂದ ಬೆಳಗಾವ, ರಾಯಚೂರ ಜಿಲ್ಲಾಡಳಿತ ಮಾದರಿಯಲ್ಲಿಯೇ ತಾವು ತಮ್ಮ ಜಿಲ್ಲೆಯಿಂದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿ ವಿನಂತಿ. ನಮ್ಮ ಸಮಸ್ಯೆಗಳನ್ನು ಸರ್ಕಾರದ ದೃಷ್ಟಿಗೆ ತಂದು ಶಾಶ್ವತ ಪರಿಹಾರಕ್ಕೆ ತಾವು ಪ್ರಯತ್ನಿಸಬೇಕಾಗಿ ಎಲ್ಲಾ ಹೊರನಾಡು ಕನ್ನಡಿಗರ ಪರವಾಗಿ ಧರ್ಮೇಂದ್ರ ಪೂಜಾರಿ ಬಗ್ದೂರಿ ಮನವಿ ಮಾಡಿದ್ದಾರೆ. 

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹೊರನಾಡಿನಲ್ಲಿ ಬದುಕು ಕಟ್ಟಿಕೊಂಡು ಜೀವಿಸುತ್ತಿರುವ ಎಲ್ಲಾ ಕನ್ನಡಿಗರಿಗೆ ಕರ್ನಾಟಕ ಸರ್ಕಾರದಿಂದ ಮೂಲ ಸೌಕರ್ಯ ಕಲ್ಪಿಸುವ ಕುರಿತು ತಮ್ಮ ಗಮನಕ್ಕೆ ತರುತ್ತಿರುವೆ. ಅನೇಕ ಸಮಸ್ಯೆಗಳನ್ನು ಹೊರನಾಡಿನ ಕನ್ನಡಿಗರು ಅನುಭವಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಘನ ಸರ್ಕಾರವು ಕಾಳಜಿವಹಿಸಿ ತೆಲಂಗಾಣ, ಆಂಧ್ರ​‍್ರದೇಶ, ಮಹಾರಾಷ್ಟ್ರ, ಕೇರಳ, ಗೋವಾ, ತಮಿಳನಾಡು ಹೀಗೆ ಹೊರ ರಾಜ್ಯದಲ್ಲಿ ಬದುಕುತ್ತಿರುವ ಪಾಲಕರ ಮಕ್ಕಳಿಗೆ ಕನ್ನಡ ಮಾಧ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹೀಗಾಗಿ ಎಲ್ಲಾ ಕನ್ನಡ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುವ ಮೂಲ ವ್ಯವಸ್ಥೆಯನ್ನು ತಾವು ಮಾಡಿಕೊಡಬೇಕಾಗಿ ವಿನಂತಿ. ಸರ್ಕಾರವು ಆಚರಣೆಗೆ ತಂದಿರುವ ಅನೇಕ ಅನುಷ್ಠಾನ ಸಮಿತಿಯ ವರದಿಗಳನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ಧರ್ಮೇಂದ್ರ ಪೂಜಾರಿ ಬಗ್ದೂರಿ ಆಗ್ರಹಿಸಿದ್ದಾರೆ.