ಲೋಕದರ್ಶನ ವರದಿ
ಬೆಳಗಾವಿ : ನಗರದ ನಾಗರಿಕರ ಜೀವನದಿಯಾಗಿರುವ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟವು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗುದ್ದು, ಪ್ರಸಕ್ತ ವರ್ಷದಲ್ಲಿ ನಗರದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭನ ವಾಗುವುದಿಲ್ಲ ಎಂದು ಮಹಾಪೌರರಾದ ಬಸಪ್ಪಾ ಚಿಕ್ಕಲದಿನ್ನಿ ಇಂದಿಲ್ಲಿ ಹೇಳಿದರು.
ಸೋಮವಾರ ದಿನದಂದು ಬೆಳಗಾವಿ ನಗರಕ್ಕೆ ನೀರು ಪೂರೈಕೆಯಾಗುವ ರಕ್ಕಸಕೊಪ್ಪ ಜಲಾಶಯಕ್ಕೆ ಇಲ್ಲಿನ ಮಹಾನಗರಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಮಧುಶ್ರೀ ಪೂಜಾರಿ ಅವರು ವಿಶೇಷ ಪೂಜೆ ನೆರೆವೆರಿಸಿ ಬಾಗಿನ ಅಪರ್ಿಸಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಕಾಲ ಕಾಲಕ್ಕೆ ಮಳೆಯಾಗದೆ ಇರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿತ್ತು. ಅದರೆ ಈ ಬಾರಿ ರಕ್ಕಸಕೊಪ್ಪ ಜಲಾಶಯವು ಪ್ರತಿವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ನೀರಿನ ಸಮಸ್ಯೆ ಉದ್ಭವಸುವ ಪ್ರಶ್ನೆ ಎದುರಾಗುವದಿಲ್ಲ ಎಂದರು. ನಾಗರಿಕರು ಪೂರೈಕೆಯಾಗುವ ನೀರನ್ನು ಮಿತವಾಗಿ ಬಳಸಿಕೊಳ್ಳುವಂತೆ ನಗರದ ಜನತೆಯಲ್ಲಿ ಮನವಿ ಮಾಡಿದರು.
ಈ ವೇಳೆಯಲ್ಲಿ ಮಹಾನಗರ ನಗರ ಸೇವಕ ದೀಪಕ ಜಮಖಂಡಿ, ಮಾಜಿ ಮೇಯರ ಸಂಜೋತಾ ಬಾಂದೇಕರ,ಸಂಜು ಸವಾಸೇರಿ, ರಮೇಶ ಸೊಂಟಕ್ಕಿ, ಕಿರಣ ಸೈನಾಕ,ಅನುಶ್ರೀ ದೇಸಪಾಂಡೆ, ಪುಸ್ಪಾ ಪರವತ್ತರಾವ್ ಮತ್ತು ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.