ರಾಯಬಾಗ: ಕಳ್ಳಭಟ್ಟಿ ಸರಾಯಿ ಮಾರಾಟ: ಬಂಧನ

ಲೋಕದರ್ಶನ ವರದಿ

ರಾಯಬಾಗ 15:  ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ 4 ಲೀ. ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಂಡಿರುವ ಘಟನೆ ಶನಿವಾರದಂದು ನಡೆದಿದೆ.

ಮೊರಬ ಗ್ರಾಮದಗುರುಸಿದ್ದ ಭೀಮಾ ಬನಪ್ಪಗೋಳ (45) ಬಂಧಿತ ಆರೋಪಿ. ಇತನು ಅಕ್ರಮವಾಗಿ 02 ಲೀ. ಸಾಮಥ್ರ್ಯದ 02 ಪ್ಲಾಸ್ಟಿಕ ಬಾಟಲಿನಲ್ಲ್ಲಿ ತಲಾ 02 ಲೀ.ದಂತೆ ಒಟ್ಟು 04 ಲೀ.ದಷ್ಟು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವಾಗ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಕಳ್ಳಭಟ್ಟಿ ಸರಾಯಿ ಜಪ್ತುಪಡಿಸಿ ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಅಬಕಾರಿ ಉಪ ನಿರೀಕ್ಷಕ ಹಣಮಂತಪ್ಪ ಪಟಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯ ಸಮಯದಲ್ಲಿ ಅಬಕಾರಿ ಉಪನಿರೀಕ್ಷಕ ವಿಜಯಕುಮಾರ ಮೆಳವಂಕಿ, ಅಬಕಾರಿರಕ್ಷಕ ಬಿ.ಎಸ್.ಪಾಟೀಲ, ಎಂ.ಎಲ್.ಸಾಲೋಟಗಿ, ಬಿ.ಹೆಚ್.ಪೂಜೇರಿ, ಎಸ್.ಬಿ.ಚಿಂಚಲಿ ಉಪಸ್ಥಿತರಿದ್ದರು.