ವಿರಾಟ್‌-ರೋಹಿತ್‌ ಎದುರು ವಿಶಾಖಪಟ್ಟಣಂನಲ್ಲಿ ಬುಮ್ರಾ ಬೆನ್ನು ಪರೀಕ್ಷೆ

ವಿಶಾಖಪಟ್ಟಣಂ, 13 ಬೆನ್ನು ನೋವಿನಿಂದ ಪನಃಶ್ಚೇತನ ಕಾರ್ಯದಲ್ಲಿ ತೊಡಗಿರುವ ಭಾರತ ತಂಡದ ಸ್ಟಾರ್ ಬೌಲರ್ ಜಸ್ಪ್ರಿತ್‌ ಬುಮ್ರಾ ಅವರು ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾದ ಅಭ್ಯಾಸದ ವೇಳೆ ಕಾಣಿಸಿಕೊಳ್ಳಲಿದ್ದಾರೆ.ಕಳೆದ ಹಲವು ತಿಂಗಳುಗಳಿಂದ ಭಾರತ ತಂಡದಿಂದ ದೂರ ಉಳಿದಿರುವ ಬುಮ್ರಾ ಅವರು ಇದೀಗ ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ, ಅವರ ಬೆನ್ನು ನೋವು ಸಂಪೂರ್ಣ ಚೇತರಿಸಿಕೊಂಡಿದೆಯೇ ಅಥವಾ ಇಲ್ಲವೇ ಎಂಬ ಪರೀಕ್ಷೆಗೆ ಬುಮ್ರಾ ವಿಶಾಖಪಟ್ಟಣಂ ನಲ್ಲಿ ನೆಟ್ಸ್‌ನಲ್ಲಿ ಒಳಗಾಗಲಿದ್ದಾರೆ.ಬುಮ್ರಾ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರಿಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಲಿದ್ದಾರೆ. ಆ ಮೂಲಕ ಬುಮ್ರಾ ಸಂಪೂರ್ಣ ಫಿಟ್‌ ಇದ್ದಾರೆಂಬ ಬಗ್ಗೆ ನಿತಿನ್‌ ಪಟೇಲ್‌ ಖಾತರಿಪಡಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ."ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಬುಮ್ರಾ ಭಾರತ ತಂಡವನ್ನು ಕೂಡಿಕೊಳ್ಳಲಿದ್ದು, ಅದ್ಭುತ ಲಯದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್‌ ಎದುರು ಅವರ ಬೆನ್ನು ನೋವಿನ ಪರೀಕ್ಷೆಗೆ ಒಳಗಾಗಲಿದ್ದಾರೆ. ಆ ಮೂಲಕ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆಯೇ ಎಂಬಂತೆ ತಿಳಿದುಕೊಳ್ಳಲಾಗುತ್ತದೆ. ಒಂದು ವೇಳೆ ಅವರು ಸಂಪೂರ್ಣ ಫಿಟ್‌ ಎಂದು ಸ್ಪಷ್ಟವಾದರೆ ಭಾರತದ ಮುಂದಿನ ವೇಳಾಪಟ್ಟಿಗೆ ಅವರನ್ನು ಪರಿಗಣಿಸಲಾಗುತ್ತದೆ," ಎಂದು ಮೂಲಗಳಿಂದ ತಿಳಿದುಬಂದಿದೆ.ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲೆಂಡ್ ಗೂ ತೆರಳುವ ಮುನ್ನ ಭಾರತ ತಂಡ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಸರಣಿಗಳಿಗೆ ಆತಿಥ್ಯ ವಹಿಸಲಿದೆ.  ಆ ವೇಳೆಗೆ ಬುಮ್ರಾ ಸಂಪೂರ್ಣ ಫಿಟ್‌ ಆಗಲು ಮುಖ್ಯ ಕೋಚ್‌ ರವಿಶಾಸ್ತ್ರಿ ಬಯಸುತ್ತಿದ್ದಾರೆ.