ಮತದಾರರಿಗೆ ಬಂಪರ್ ಆಫರ್.. ಬಸ್ ನಿಂದ ವಿಮಾನದವರೆಗೆ ಎಲ್ಲವೂ ಫ್ರೀ...!

ನವದೆಹಲಿ,  ಫೆ ೮,  ದೆಹಲಿ ವಿಧಾನಸಭೆಗೆ ಇಂದು   ಚುನಾವಣೆ  ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಯೇ ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಅಂತೆಯೇ, ಆಟೋ, ಬಸ್  ಹಾಗೂ ವಿಮಾನಯಾನ ಸಂಸ್ಥೆಗಳು   ಮತದಾರರನ್ನು   ಪ್ರೋತ್ಸಾಹಿಸಲು   ಹಲವು  ಆಫರ್ ಗಳನ್ನು ಪ್ರಕಟಿಸಿವೆ. ಬೈಕ್-ಟ್ಯಾಕ್ಸಿ ಬುಕಿಂಗ್ ಆ್ಯಪ್  "ರಾಪಿಡೋ"    ದೆಹಲಿ ಚುನಾವಣೆಯಲ್ಲಿ   ಮತದಾನ ಮಾಡುವವರಿಗೆ   ಫ್ರೀ  ರೈಡಿಂಗ್   ಕಲ್ಪಿಸಿರುವುದಾಗಿ ಪ್ರಕಟಿಸಿದೆ.   ಮೂರು ಕಿಲೋಮೀಟರ್ ವ್ಯಾಪ್ತಿಯ   ಮತಗಟ್ಟೆವರೆಗೆ   ಉಚಿತ ಸೇವೆ  ಕಲ್ಪಿಸುವುದಾಗಿ ರಾಪಿಡೋ ಹೇಳಿದ್ದು, ಈ ಸೇವೆ  ಬೆಳಿಗ್ಗೆ ೭ ರಿಂದ ಸಂಜೆ ೬ ರವರೆಗೆ ಇರಲಿದೆ  ಎಂದು ತಿಳಿಸಿದೆ.  

ಅದೇ ರೀತಿ “ಅಭಿ ಬಸ್ ಡಾಟ್ ಕಾಮ್ “  ಕೂಡ ’ಐ ವೋಟ್ ಐ ವಿನ್’ ಎಂಬ ಘೋಷಣೆಯಡಿ   ಮತದಾರರಿಗೆ  ಉಚಿತ ಬಸ್ ಸೇವೆಗಳನ್ನು ಕಲ್ಪಿಸುವುದಾಗಿ ಪ್ರಕಟಿಸಿದೆ. ಫೆಬ್ರವರಿ ೫ ರಿಂದ ಪ್ರಾರಂಭವಾದ ಈ ಅಭಿಯಾನ ಫೆಬ್ರವರಿ ೧೦ ರವರೆಗೆ ಮುಂದುವರಿಯಲಿದೆ ಎಂದು ಕಂಪನಿ ತಿಳಿಸಿದೆ.  ಸ್ಪೈಸ್ ಜೆಟ್   ವಿಮಾನ ಯಾನ ಸಂಸ್ಥೆ   ಸಹ ಇಂದು ಮತದಾರರಿಗೆ ಉಚಿತ ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ.  ಇಂದು ಸ್ಪೈಸ್‌ಜೆಟ್  ಮೂಲಕ  ದೆಹಲಿಗೆ  ಬರುವವರು  ಇಂದೇ ಹಿಂದಿರುಗಿದರೆ   ಎರಡು ಟಿಕೆಟ್‌ಗಳಲ್ಲಿ ಮೂಲ ಟಿಕೆಟ್ ಶುಲ್ಕವನ್ನು  ಮರುಪಾವತಿ ಮಾಡುವುದಾಗಿ  ಹೇಳಿದೆ.