ಮೈಲಾರ ಜಾತ್ರೆಯಲ್ಲಿ ಎತ್ತು ಸಾವು

Bull died in Mylara fair

ಮೈಲಾರ ಜಾತ್ರೆಯಲ್ಲಿ ಎತ್ತು ಸಾವು 

ಹೂವಿನಹಡಗಲಿ 13: ಹೃದಯಾಘಾತದಿಂದ ಎತ್ತು ಸಾವೀಗೀಡಾದಘಟನೆ ಹೂವಿನಹಡಗಲಿ ತಾಲ್ಲೂಕು ಮೈಲಾರ ಬುಧವಾರ ಬೆಳಿಗ್ಗೆ ನಡೆದಿದೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಹೊಸ ನೀರಲಗಿ ಗ್ರಾಮದ ಶಿವಪ್ಪ ನಿಂಗಪ್ಪ ಮಾಗಿ ಎಂಬ ರೈತರಿಗೆ ಸೇರಿದ ಎತ್ತು ಎನ್ನಲಾಗಿದೆ. ಸ್ವಾಗ್ರಾಮದಿಂದ ಮೈಲಾರಲಿಂಗೇಶ್ವರ ಜಾತ್ರೆಗೆಂದು ಸೋಮವಾರ ರಾತ್ರಿ ಮೈಲಾರಕ್ಕೆ ಬಂದಿದ್ದರು. ಎಂದಿನಂತೆ ಬೆಳಿಗ್ಗೆ ಎತ್ತು ಮಯತೊಳೆದು ಬಂದು ಕಟ್ಟಿ ಮೇವು ಹಾಕಿದಾಗೆ ಮೈವು ತಿನ್ನುತ್ತಿದ್ದ ಎತ್ತು ಇದ್ದಕ್ಕಿದ್ದ ಹಾಗೆ ಮಲಗಿ ಪ್ರಾಣ ಬಿಟ್ಟಿತು ಎಂದು ಎತ್ತಿನ ಮಾಲಿಕರು ತಿಳಿಸಿದರು.  

ಜಾತ್ರೆಯಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆಯಲ್ಲಿದ್ದ ಡಾ.ಸಂತೋಷ ಲಂಬಾಣಿ ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದರು.ನಂತರ ಹೂವಿನಹಡಗಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಬಣಕಾರ ಎತ್ತು ಆಕಸ್ಮಿಕವಾಗಿ ಸಾವೀಗೀಡಾಗಿರುವುದರಿಂದ ಇಲಾಖೆಯಿಂದ 10ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.