ಮಾಸ್ಕೋ, ನವೆಂಬರ್ 12 : ಬಾಂಗ್ಲಾದೇಶದ ಪ್ರಬಲ ಚಂಡಮಾರುತ ಬಲ್ಬುಲ್ನಿಂದ ಸಾವನ್ನಪ್ಪಿದವರ ಸಂಖ್ಯೆ 26 ಕ್ಕೆ ಏರಿದೆ ಎಂದು ಸ್ಥಳೀಯ ಪತ್ರಿಕೆ ಡೈಲಿ ಸ್ಟಾರ್ ವರದಿ ಮಾಡಿದೆ. ಮುಖ್ಯವಾಗಿ ಬಲವಾದ ಗಾಳಿಯಿಂದ ಬಿದ್ದ ಮರಗಳಿಂದ ಅಧಿಕ ಸಾವುಗಳು ಸಂಭವಿಸಿವೆ. ಮತ್ತೆ ಕೆಲವರು ನೀರಿನಲ್ಲಿ ಮುಳುಗಿ, ಕೆಲವರು ಮನೆಗಳ ಕುಸಿತದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ. ಒಟ್ಟು 51 ಮೀನುಗಾರರು ಕಾಣೆಯಾಗಿರವ ವರದಿಯಾಗಿದೆ.ಚಂಡಮಾರುತದ ಎಚ್ಚರಿಕೆಯ ಹೊರತಾಗಿಯೂ ಮೀನುಗಾರರು ಸಮುದ್ರಕ್ಕೆ ಇಳಿದ ಪರಿಣಾಮ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಈವರೆಗೂ 2.16 ಮಿಲಿಯನ್ ಜನರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ್ದಾರೆ ಮತ್ತು ಅವರನ್ನು ವಿಶೇಷವಾಗಿ ಸಿದ್ಧಪಡಿಸಿದ ಆಶ್ರಯಕ್ಕೆ ಕರೆತಂದಿದ್ದಾರೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ರಾಜ್ಯ ಸಚಿವ ಎನಾಮೂರ್ ರಹಮಾನ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.