ಪುಣೆ 21: ನಗರದ ಮುಂಧ್ವಾ ಪ್ರದೇಶದಲ್ಲಿ ಇಂದು ಶನಿವಾರ ಬೆಳಗ್ಗೆ 30 ವರ್ಷ ಹಳೆಯ ಕಟ್ಟಡ ಕುಸಿದು ಬಿದ್ದು ಐವರು ಮೃತಪಟ್ಟು ಹಲವರು ಗಾಯಗೊಂಡರು.
ಕಟ್ಟಡ ಕುಸಿದ ಕ್ಷಣವೇ ರಕ್ಷಣಾ ಕಾಯರ್ಾಚರಣೆ ಆರಂಭವಾಯಿತು. ಕುಸಿದ ಕಟ್ಟಡದ ಅವಶೇಷಗಳಡಿಯಿಂದ ಕನಿಷ್ಠ 8 ಮಂದಿಯನ್ನು ಮೇಲಕ್ಕೆತ್ತಿ ರಕ್ಷಿಸಲಾಯಿತು. ಮಗುಮೊಂದು ಇನ್ನೂ ಅವಶೇಷಗಳಡಿ ಸಿಲುಕಿರುವುದಾಗಿ ವರದಿಯಾಗಿದೆ.
ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
30 ವರ್ಷ ಹಳೆಯದಾಗಿರುವ ಈ ಕಟ್ಟಡ ಅತ್ಯಂತ ಜೀಣರ್ಾವಸ್ಥೆಗೆ ತಲುಪಿದ್ದು ಇದನ್ನು ಕೆಡಹಬೇಕೆಂದು ಸಿಟಿ ಮುನಿಸಿಪಲ್ ಕೌನ್ಸಿಲ್ ನೊಟೀಸ್ ಜಾರಿ ಮಾಡಿತ್ತು ಎಂದು ಎಎನ್ಐ ವರದಿ ತಿಳಿಸಿದೆ.