ಸುಶಿಕ್ಷಿತ ಶಿಕ್ಷಣದಿಂದ ಸುಶಿಕ್ಷಿತ ಭಾರತ ನಿರ್ಮಾಣ - ಪುಷ್ಪ ನಾಡಿಗೇರ

Building a well-educated India through well-educated education - Pushpa Nadigera

ಸುಶಿಕ್ಷಿತ ಶಿಕ್ಷಣದಿಂದ ಸುಶಿಕ್ಷಿತ ಭಾರತ ನಿರ್ಮಾಣ - ಪುಷ್ಪ ನಾಡಿಗೇರ  

ರಾಣೇಬೆನ್ನೂರ  04: ಶಾಲೆಯಲ್ಲಿ ಕಲಿತ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಕರಿಗೆ ತಾವು ಕಲಿಸಿದ್ದು ಸಾರ್ಥಕವಾಯಿತು ಎನ್ನುವ ಅಭಿಮಾನ ಮೂಡುತ್ತದೆ ಎಂದು   ಸಿದ್ಧಿ ವಿನಾಯಕ ಸೇವಾ ಸಮಿತಿಯ ಪ್ರಾಚೀನ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ಪುಷ್ಪಾ ನಾಡಿಗೇರ ಹೇಳಿದರು.  ಅವರು ಶ್ರೀರಾಮನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಲಾಗಿದ್ದ,     "ಗುರುವಂದನಾ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಕೃತ ಭಾಷೆಯನ್ನು ಪಸರಿಸುವಲ್ಲಿ ನಮ್ಮ ಪ್ರಾಚೀನ ಪ್ರಾಥಮಿಕ ಶಾಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ  1994- 95 ನೇ ಸಾಲಿನಲ್ಲಿ  ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳು, ತಮ್ಮ ಶಿಕ್ಷಣದ ಸಂದರ್ಭದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಸಂಸ್ಕೃತದೊಂದಿಗೆಅಧ್ಯಯನ ಮಾಡಿರುವುದು ತಮ್ಮ ಚಿತ್ತದಲ್ಲಿದೆ ಎಂದರು.  

 ಪ್ರಾಸ್ತಾವಿಕವಾಗಿ ಮಾತನಾಡಿದ ಜಗದೀಶ ಮಳಿಮಠ ಅವರು ಸಂತ ಕಬೀರದಾಸರು ಹೇಳುವಂತೆ ಗುರುವಿನ ಮಹಿಮೆ ಅಪಾರ. ಆಕಾಶವನ್ನೇ ಬರೆಯುವ ಹಾಳೆಯಂತೆ ಉಪಯೋಗಿಸಿ, ಸಪ್ತ ಸಾಗರಗಳನ್ನೇ ಮಸಿಯಾಗಿ ಬಳಸಿ, ಕಾಡಿನಲ್ಲಿ ಬೆಳೆದಿರುವ ಮರಗಳನ್ನೇ ಲೇಖನಿಯಾಗಿ ಬಳಸಿದರೂ ಕೂಡ ಗುರುವಿನ ಮಹಿಮೆಯನ್ನು ವರ್ಣಿಸಲಾಗದು. ಬಾಲ್ಯದಲ್ಲಿಯೇ ತಮ್ಮ ಪ್ರೀತಿಪೂರ್ವಕ ಬೋಧನೆಯ ಮೂಲಕ ತರಗತಿ ಕೋಣೆಗಳ ಮಧ್ಯೆ ಬಾಹ್ಯ ಪ್ರಪಂಚವನ್ನು ಪರಿಚಯಿಸಿದ ಎಲ್ಲ ಗುರುಮಾತೆಯರಿಗೆ ನಾವೆಲ್ಲರೂ ಸದಾ ಕಾಲ ಚಿರಋಣಿಗಳಾಗಿರುತ್ತೆವೆ ಎಂದರು. ಶಾಲೆಯ ನಿವೃತ್ತ ಗುರುಮಾತೆಯರಾದ ಕಮಲಾ ಪುರೋಹಿತ, ಕೆ ಸುವರ್ಣ, ಗೀತಾ ಹೆಗಡೆ, ನಯನ   

ಕುರ್ತಕೋಟಿ, ರವಿ ಮಕರಿ, ಹಾಗೂ ಪುಷ್ಪ ನಾಡಿಗೇರ ಅವರನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಪರವಾಗಿ ಕೃತಜ್ಞತೆಯೊಂದಿಗೆ ಅಭಿನಂದಿಸಿ, ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ  ಪ್ರತಿಭಾವಂತ ವಿದ್ಯಾರ್ಥಿನಿ, ಪ್ರಸ್ತುತ ದಾವಣಗೆರೆ ಜಿಲ್ಲೆಯ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ   ಸುಮಂಗಲಾ ಎಲೆದಹಳ್ಳಿ  ಅವರನ್ನು ಗೌರವ ಪೂರ್ವಕವಾಗಿ  ಸನ್ಮಾನಿಸಲಾಯಿತು.  

    ಹಳೆಯ ವಿದ್ಯಾರ್ಥಿಗಳ ಸಂಘದ ಗೀರೀಶ್ ಅಗಡಿ ,ರಾಜೇಶ್ವರಿ  ಕೆ , ಅಶ್ವಿನಿ ಪಾಟೀಲ್, ಮೆಹಬೂಬ ಸಿದ್ದಿ, ಮನಸೂರ ಖತೀಬ, ಸೊಂಡೂರಿನ ಕೆ ಪಿ ವಿದ್ಯಾ,  ದಾವಣಗೆರೆಯ ಭಾರತಿ ಲಕ್ಷ್ಮೇಶ್ವರ ಸೇರಿದಂತೆ ಮತ್ತಿತರರು   ಉಪಸ್ಥಿತರಿದ್ದರು.