ಲೋಕದರ್ಶನ ವರದಿ
ಬೆಟಗೇರಿ 15: ನಾಗನೂರ ಬಡ್ಸ್ ಸಂಸ್ಥೆ ಹಾಗೂ ಜಪಾನ ಎನ್ಎಫ್ಯುಎ ಸಹಯೋಗದಲ್ಲಿ ನೀಡುವ ಕಲಿಕಾ ಮತ್ತು ಭೋಧನಾ ಪರಿಕರಗಳ ಸದುಪಯೋಗವನ್ನು ಶಾಲಾ ಮಕ್ಕಳು ಪಡೆದುಕೊಳ್ಳಬೇಕು ಎಂದು ನಾಗನೂರ ಬಡ್ಸ್ ಸಂಸ್ಥೆಯ ಕಾರ್ಯನಿವರ್ಾಹಕ ನಿದರ್ೇಶಕ ಆರ್.ಎಮ್.ಪಾಟೀಲ ಹೇಳಿದರು.
ನಾಗನೂರ ಬಡ್ಸ್ ಸಂಸ್ಥೆ ಹಾಗೂ ಜಪಾನ ಎನ್ಎಫ್ಯುಎ ಸಹಯೋಗದಲ್ಲಿ ಶನಿವಾರ ಡಿ.14 ರಂದು ನಡೆದ ಪ್ರವಾಹೊತ್ತರ ಶೈಕ್ಷಣಿಕ ಪುನರ್ವಸತಿ ಯೋಜನೆ ಅಡಿಯಲ್ಲಿ ಸಮೀಪದ ಉದಗಟ್ಟಿ ಗ್ರಾಮದ ಸಕರ್ಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎಲ್ಲ ಮಕ್ಕಳಿಗೆ ಕಲಿಕಾ ಮತ್ತು ಭೋದನಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಗೋಕಾಕ-ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳ ರೈತರು, ನಾಗರಿಕರು ಪ್ರವಾಹಕ್ಕೆ ಸಿಲುಕಿ ಮನೆ, ಬೆಳೆಗಳನ್ನು ಕಳೆದುಕೊಂಡದ್ದು ಶೊಚನೀಯವಾಗಿದೆ ಎಂದರು.
ಉದಗಟ್ಟಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ 392 ಮಕ್ಕಳಿಗೆ, ಭಾಗನ್ನವರ ತೋಟದ ಸಕರ್ಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ 73 ಮಕ್ಕಳಿಗೆ, ನಾಗಲಿಂಗೇಶ್ವರ ತೋಟದ ಸಕರ್ಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ 64 ಮಕ್ಕಳಿಗೆ ಕಲಿಕಾ ಪರಿಕರ ಮತ್ತು ಶಾಲೆಗೆ ಭೋಧನಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಬಡ್ಸ್ ಎನ್ಸಿಡಿಪಿ ಯೋಜನೆಯ ಕಾರ್ಯಕ್ರಮ ಅಧಿಕಾರಿ ಅಶೋಕ ಪೂಜೇರ ತಿಳಿಸಿದರು.
ಮಹೇಶ ನೀಲಗಾರ, ಮಲಕಾರಿ ವಡೇರ, ಬಸರೆಪ್ಪ ಶಿಗಿಹಳ್ಳಿ, ತುಕ್ಕಾನಟ್ಟಿ ಬಡ್ಸ್ ಬಿ.ಎಸ್.ಡಬ್ಲೂ ಕಾಲೇಜಿನ ವಿದ್ಯಾಥರ್ಿಗಳು, ಸಿಎಲ್ಸಿ-ಎಮ್ಸಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಸಕರ್ಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕರು, ಶಿಕ್ಷಣಪ್ರೇಮಿಗಳು, ಹಿರಿಯ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.