ಆರ್ಥಿಕ ವಿಷಯಗಳಿಗೆ ಬಜೆಟ್ ಅಧಿವೇಶನ ಒತ್ತು-ಪ್ರಧಾನಿ ಮೋದಿ

ನವದೆಹಲಿ, ಜ 31, ಇಂದಿನಿಂದ ಆರಂಭವಾಗುತ್ತಿರುವ ಬಜೆಟ್ ಅಧಿವೇಶನದಲ್ಲಿ ಆರ್ಥಿಕ ವಿಷಯಗಳಿಗೆ ಒತ್ತು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರಮೋದಿ ಶುಕ್ರವಾರ ಹೇಳಿದ್ದಾರೆ. ‘ಪ್ರಸಕ್ತ ಅಧಿವೇಶನವು ಆರ್ಥಿಕ ವಿಷಯಗಳಿಗೆ ಒತ್ತು ನೀಡಲಿದೆ. ಈ ವಿಷಯಗಳಿಗೆ ಸಂಬಂಧಿಸಿ ಉತ್ತಮ ಚರ್ಚೆಗಳಾಗಬೇಕೆಂಬುದು ತಮ್ಮ ಇಚ್ಛೆಯಾಗಿದೆ.’ ಎಂದು ಸಂಸತ್ ನ ಜಂಟಿ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸುವ ಕೆಲವೇ ನಿಮಷಗಳ ಮುನ್ನ ಪ್ರಧಾನಿ ಮೋದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.  

ಗುರುವಾರ ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ‘ ಪ್ರತಿಪಕ್ಷಗಳ ನಾಯಕರು ದೇಶದ ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಕೋರಿದ್ದಾರೆ. ಇದನ್ನು ತಾವು ಸ್ವಾಗತಿಸಲಿದ್ದು, ಪ್ರತಿಪಕ್ಷಗಳ ನಾಯಕರು ಸಲಹೆ ನೀಡಿದಂತೆ ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ.’ ಎಂದು ಹೇಳಿದ್ದರು. ಜಾಗತಿಕ ಸನ್ನಿವೇಶದ ಲಾಭವನ್ನು ಭಾರತ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ನಾವೆಲ್ಲ ಗಮನ ಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು.