ಬೌದ್ಧ ಧರ್ಮ ಕೇವಲ ಪೂಜಿಸಲು ಅಲ್ಲ, ಅದು ಕ್ರಾಂತಿಯ ಸಂಕೇತವಾಗಿದೆ :ಡಾ. ಶಾಕು ಬೋಧಿಧಮ್ಮ

ಬೌದ್ಧ ಧರ್ಮ ಕೇವಲ ಪೂಜಿಸಲು ಅಲ್ಲ, ಅದು ಕ್ರಾಂತಿಯ ಸಂಕೇತವಾಗಿದೆ :ಡಾ. ಶಾಕು ಬೋಧಿಧಮ್ಮ Buddhism is not just for worship, it is a symbol of revolution: Dr. Shaku Bodhidhamma

ಬೌದ್ಧ ಧರ್ಮ ಕೇವಲ ಪೂಜಿಸಲು ಅಲ್ಲ, ಅದು ಕ್ರಾಂತಿಯ ಸಂಕೇತವಾಗಿದೆ :ಡಾ. ಶಾಕು ಬೋಧಿಧಮ್ಮ  

ವಿಜಯಪುರ 14 : ಡಾ. ಬಾಬಾಸಾಹೇಬರು ಅಂಬೇಡ್ಕರ್ ಅವರು ನಮಗೆ ಬೌದ್ಧ ಧರ್ಮವನ್ನು ಕೇವಲ ಪೂಜಿಸಲು ನೀಡಿಲ್ಲ. ಅದೊಂದು ಕ್ರಾಂತಿಯ ಸಂಕೇತವಾಗಿದೆ ಎಂದು ಬೌದ್ಧವಿಹಾರ ನಿರ್ಮಾಣ ಸಮಿತಿ ಗೌರಾವಾಧ್ಯಕ್ಷ ಹಾಗೂ ಝೆನ್ ಮಾಸ್ಟರ್ ಡಾ. ಶಾಕು ಬೋಧಿಧಮ್ಮ ಹೇಳಿದರು, 

ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಹಮ್ಮಿಕೊಂಡ ಧಮ್ಮಚಕ್ರ ಪರಿವರ್ತನ ದಿನ ಹಾಗೂ ವರ್ಷಾವಾಸ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಸ್ವಾಭಿಮಾನದ ಬದುಕನ್ನು ಸಾಗಿಸಲು ಪ್ರೀತಿ, ಮೈತ್ರಿಯ ಸಂದೇಶವನ್ನು ಭಗವಾನ ಬುದ್ಧರು ನೀಡಿದ್ದಾರೆ. ಆದ್ದರಿಂದ ಬೌದ್ಧ ಧರ್ಮದ ತತ್ವ ಸಿದ್ಧಾಂತಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪಸರಿಸುವ ಕೆಲಸವನ್ನು ಬುದ್ಧ ಮತ್ತು ಅಂಬೇಡ್ಕರ್ ಅನುಯಾಯಿಗಳು ಮಾಡಬೇಕು. ಭಾರತವನ್ನು ಬೌದ್ಧಮಯ ಮಾಡಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು. 

ಬ್ರಾಹ್ಮಣವಾದವು ಯಾವುದಕ್ಕೂ ಹೆದರುವುದಿಲ್ಲ. ಅದು ಹೆದರುವುದು ಅಂಬೇಡ್ಕರ್‌ವಾದಕ್ಕೆ ಮಾತ್ರ. ಇದು ಭಾಷಣ ಮಾಡುವ ಸಮಯವಲ್ಲ. ಹೋರಾಟ ಮಾಡುವ ಸಮಯ ಬಂದಿದೆ. ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಅಂಬೇಡ್ಕರ್‌ವಾದಿಗಳು ಮತ್ತು ಬೌದ್ಧರ ಮೇಲಿದೆ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೇಲೆ ವಕೀಲನೊಬ್ಬ ಶೂ ಎಸೆದದ್ದು ಕೇವಲ ಗವಾಯಿ ಮೇಲೆ ಅಲ್ಲ, ಇಡೀ ಅಂಬೇಡ್ಕರ್‌ವಾದಿಗಳ ಮೇಲಿನ ದಾಳಿ ಎಂದ ಅವರು, ಮೀಸಲಾತಿಯ ವಿಷಯಕ್ಕಾಗಿ ಅಂಬೇಡ್ಕರ್ ಅನುಯಾಯಿಗಳು ಬೌದ್ಧ ಧಮ್ಮ ದೀಕ್ಷಾ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ಸಂಘರ್ಷ ನ್ಯೂಸ್ ಸಂಪಾದಕರಾದ ಯಮನಪ್ಪ ಗುಣದಾಳ, ಸಾಮ್ರಾಟ ಅಶೋಕರು ಯುದ್ಧವನ್ನು ತ್ಯಜಿಸಿ ವಿಜಯದಶಮಿಯಂದು ಭಗವಾನ ಬುದ್ಧರನ್ನು ಅಪ್ಪಿಕೊಂಡರು. ಆ ದಿನವನ್ನು ಅಶೋಕ ವಿಜಯದಶಮಿ ಎಂದು ಆಚರಿಸಲಾಗುತ್ತಿದೆ. ಸಾಮ್ರಾಟ್ ಅಶೋಕರು 84 ಸಾವಿರ ಬುದ್ಧವಿಹಾರಗಳನ್ನು ಸ್ಥಾಪಿಸಿದ್ದರು. ಆದರೆ ಈಗ ಅವರು ಸ್ಥಾಪಿಸಿದ ಒಂದೇ ಒಂದು ವಿಹಾರಗಳಿಲ್ಲ, ಅವುಗಳೆಲ್ಲವು ತಿರುಪತಿ ತಿಮ್ಮಪ್ಪ, ಪುರಿ ಜಗನ್ನಾಥ ದೇವಾಲಯಗಳಾಗಿ ಮಾರಿ​‍್ಡಸಿ ಬೌದ್ಧರ ಇತಿಹಾಸವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು. ಜಗತ್ತಿನ ಎಲ್ಲ ಧರ್ಮವನ್ನು ಅಧ್ಯಯನ ಮಾಡಿ ಶಾಂತಿ, ಸಹನೆಯ, ಸಮತೆಯ ಸಿದ್ಧಾಂತದ ಬೌದ್ಧ ಧರ್ಮವನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಅಕ್ಟೋಬರ್ 14 ರಂದು 5 ಲಕ್ಷ ಅನುಯಾಯಿಗಳೊಂದಿಗೆ ಸ್ವೀಕರಿಸಿದರು. ದಲಿತರು, ಅಂಬೇಡ್ಕರ್ ವಿಚಾರವಾದಿಗಳು ಕೇವಲ ಭಾಷಣಕ್ಕೆ ಸೀಮಿತವಾಗದೇ ಬೌದ್ಧ ಆಚರಣೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು, ಬಾಬಾಸಾಹೇಬರು ಎಳೆದು ತಂದಿರುವ ವಿಮೋಚನಾ ರಥವನ್ನು ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ ಆಸಂಗಿ ಅವರು ಮಾತನಾಡಿ, ಮುನುಸ್ಮೃತಿಯನ್ನು ಧಿಕ್ಕರಿಸಿ ಮಾನವ ಧರ್ಮವಾದ ಬೌದ್ಧ ಧರ್ಮವನ್ನು ಡಾ. ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಭಾರತದಲ್ಲಿನ ಜಾತಿ ತಾರತಮ್ಯ, ಅಸಮಾನತೆಯನ್ನು ಹೋಗಲಾಡಿಸಲು ಬೌದ್ಧ ಧರ್ಮದಿಂದ ಮಾತ್ರ ಸಾಧ್ಯ ಎಂದು ಹೇಳಿದರು. 

ಬೌದ್ಧವಿಹಾರ ನಿಮಾಣ ಸಮಿತಿ ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾಜ ಸೇವಕರಾದ ಬಾಬಾಸಾಹೇಬ ವಿಜಯದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೌದ್ಧವಿಹಾರ ನಿಮಾಣ ಸಮಿತಿ ನಿರ್ದೇಶಕ ಆನಂದ ಓದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೌದ್ಧವಿಹಾರ ನಿಮಾಣ ಸಮಿತಿಯ ಸಲಹಾ ಸಮಿತಿ ಸದಸ್ಯ ಪ್ರತಾಪ ಚಿಕ್ಕಲಕಿ ಕಾರ್ಯಕ್ರಮವನ್ನು ನಿರೂಪಿಸಿದರು. ಬೌದ್ಧವಿಹಾರ ನಿಮಾಣ ಸಮಿತಿಯ ನಿರ್ದೇಶಕ ಸುರೇಶ ಘೊಣಸಗಿ ವಂದಿಸಿದರು.