ಪೃಥ್ವಿಗೆ ಕಂಚು ; ರಾಷ್ಟ್ರ ಮಟ್ಟಕ್ಕೆ ಗ್ರಾಮದ ಹೆಸರು

Bronze medal for Pruthvi

ಮಹಾಲಿಂಗಪುರ 11: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕೆಸರಗೊಪ್ಪ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಪೃಥ್ವಿ ಧರೆಪ್ಪ ಬ್ಯಾಕೋಡ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಟ್ರಯಥ್ಲಾನ್ ‘ಸಿ’ವಿಭಾಗದಲ್ಲಿ ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟದಲ್ಲಿ ಗ್ರಾಮದ ಕೀರ್ತಿ ಪತಾಕೆ ಹಾರಿಸಿದ್ದಾಳೆ. 

ಒರಿಸ್ಸಾದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಡಿ.7ರಿಂದ 11ರವರೆಗೆ ಜರುಗುತ್ತಿರುವ 39ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 14ವರ್ಷ ವಯೋಮಿತಿಯ ಟ್ರಯಥ್ಲಾನ್ ‘ಸಿ’ವಿಭಾಗ ( 60ಮೀ ಓಟ, 600 ಮೀ ಓಟ, ಉದ್ದ ಜಿಗಿತ)ದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗಳಿಸಿ ಭರವಸೆ ಮೂಡಿಸಿರುವ ಪೃಥ್ವಿ ಸಮೀಪದ ತೇರದಾಳದ ಡಾ.ಸಿದ್ದಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾಳೆ,  

ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳ ನಂತರದ ಸಾಧನೆಯಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಹೆಸರು ಪಸರಿಸಿದ ಪೃಥ್ವಿಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಗುರುಹಿರಿಯರು ಅಭಿನಂದಿಸಿದ್ದಾರೆ.