ಲೋಕದರ್ಶನ ವರದಿ
ಕೊಪ್ಪಳ : ನವ್ಹಂಬರ 18, 19, 20ರ ಮೂರು ದಿನಗಳ ಕಾಲ ಬೆಳಗಾವಿಯ ಕೊಲ್ಲಾಪೂರ ವೃತ್ತದ ಹತ್ತಿರ ಕ್ರೀಡಾ ವಸತಿ ನಿಲಯದ ಒಳಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಕ ಇಲಾಖೆ ಬೆಳಗಾವಿ ಇವರ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14 ವರ್ಷ ವಯೋಮಿತಿ ಒಳಗಿನ 22ಕೆ.ಜಿ ಕುಮಿತೆ ವಿಭಾಗದ ಸ್ಪರ್ಧೆಯಲ್ಲಿ ಗಂಗಾವತಿಯ ಮಹಿಳಾ ಎಂ.ಎಚ್.ಪಿ.ಎಸ್ ಶಾಲೆಯ ಉಷಾ ಗೋಪಾಲ ಸ್ಫರ್ದೇಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿಗೆ ಕರ್ನಾಟಕ ಕರಾಟೆ ಡೂ ಅಸೋಷಿಯೇಷನ್ನ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಚೇರಮನ್ ಅಲ್ತಾಫ ಪಾಷಾ, ಕಾರ್ಯದರ್ಶಿ ಸತೀಶ ಬೆಳಮನಿ, ದೈಶಿಕ ಶಿಕ್ಷಣಾಧಿಕಾರಿಗಳು ಪದಕ ಪ್ರಧಾನ ಮಾಡಿ ಪ್ರಮಾಣ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮೌನೇಶ ಎಸ್ ವಡ್ಡಟ್ಟಿ, ದೈಹಿಕ ಶಿಕ್ಷಣ ಶಿಕ್ಷಕಿ ಗೀತಾ ಎಂ, ನಿರ್ಣಾಯಕ ಪ್ರಕಾಶ, ತರಬೇತಿದಾರ ಷಣ್ಮುಖ ಗಂಗಾ, ಸೈಯದ್ ಪಾಷಾ ಹೂಗಾರ, ಸೋಮಲಿಂಗ, ವಿಠ್ಠಲ ಹೆಚ್, ರಾಕೇಶ ಕುಂಬಾರ, ದೇವಪ್ಪ ಕಲ್ಲಣ್ಣನವರ, ಬಾಬು, ಚಿರಂಜೀವಿ ಇತರರು ಇದ್ದರು.
ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕೆ. ಬಸವರಾಜ ಜಿಲ್ಲೆಯ ಎಲ್ಲಾ ಕರಾಟೆ ಶಿಕ್ಷಕರು ವಿದ್ಯಾರ್ಥಿನಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.