ಕಾಲುಮುರಿದ ಗ್ಯಾರಂಟಿ ಯೋಜನೆ : ಮ್ಯಾಗೇರಿ
ಶಿಗ್ಗಾವಿ 18 : ಗ್ಯಾರಂಟಿ ಹೆಸರ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆರು ತಿಂಗಳಿಂದ ಗ್ರಹಲಕ್ಷ್ಮಿ ಅನ್ನ ಭಾಗ್ಯ ಹೆಚ್ಚು ಹಣ ಇಲ್ಲದೆ ದಿವಾಳಿಯಾಗಿದೆ ಎಂದು ಶಿಗ್ಗಾವಿ ತಾಲೂಕ ನಿಕಟ ಪೂರ್ವ ಬಿಜೆಪಿ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಬಂದ ನಂತರ ಮೂಲಭೂತ ಸೌಕರ್ಯದಿಂದ ಹಿಡಿದು ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗಿವೆ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣ ಎಲ್ಲಿ ಹೋಯಿತು ಹೆಣ್ಣು ಮಕ್ಕಳಿಗೆ ನೀಡುತ್ತಿರುವ 2000 ಗ್ರಹಲಕ್ಷ್ಮಿ ಹಣ ಬರುತ್ತಿಲ್ಲ ಯುವನಿಧಿ ಮಾತ್ರ ಕೇವಲ ಬಾಯಲ್ಲಿ ಘೋಷಣೆಯಾಯಿತು ಯಾರಿಗೂ ಸಿಗುತ್ತಿಲ್ಲ ಅನ್ನ ಭಾಗ್ಯ ಹೆಚ್ಚುವರಿ ಹಣ ಸಿಗುತ್ತಿಲ್ಲ ಯಾವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈಗ ಆರು ತಿಂಗಳಿಂದ ಗ್ರಹಲಕ್ಷ್ಮಿ ಹಣ ಏಕೆ ನಿಂತಿತು ಕೊಟ್ಟ ಮಾತಿಗೆ ಕಾಂಗ್ರೆಸ್ ಸರ್ಕಾರ ತಪ್ಪಿದೆ ಕೂಡಲೇ ಆರು ತಿಂಗಳಿಂದ ನಿಂತ ಗ್ರಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.