ವಿಕಲಚೇತನರನ್ನು ಮುಖ್ಯವಾಹಿನಿಗೆ ತಂದು ಸರ್ಕಾರಿ ಸೌಲಭ್ಯ ಒದಗಿಸಿ

ಗದಗ 03:  ವಿಕಲಚೇತನರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು.  ಅವರಿಗೆ  ಸಕರ್ಾರ ನೀಡಿರುವ  ಸೌಲಭ್ಯಗಳನ್ನು ಸರಿಯಾಗಿ  ತಲುಪಿಸಬೇಕು  ಎಂದು   ಗದಗ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.

ಗದಗ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗಳು  ಹಾಗೂ ಜಿಲ್ಲಾ ಕಾನೂನು ಸೇವಾ  ಪ್ರಾಧಿಕಾರ  ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಸೇವಾನಿರತ ಸಂಘ ಸಂಸ್ಥೆಗಳು ಹಾಗೂ ವಿಕಲಚೇತನರ ಕೆ ್ಷಮಾಭಿವೃದ್ಧಿ ಸಂಘ ಸಂಸ್ಥೆಗಳು ಗದಗ ಇವರ ಸಂಯುಕ್ತ ಆಶ್ರಯದಲ್ಲಿಂದು ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ  ನಗರದ  ಕೆ.ಎಚ್.ಪಾಟೀಲ ಸಭಾಭವನದಲ್ಲಿ   ಏರ್ಪಡಿಸಲಾಗಿದ್ದ  ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು  ಮಾತನಾಡಿದರು.

ವಿಕಲಚೇತನರಿಗೆ ಕೇವಲ ಅನುಕಂಪ ಬೇಡ. ವಿಕಲತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಥರ್ೈಸಿಕೊಂಡು ಅವರನ್ನು ಬೆಂಬಲಿಸಿ ಆರ್ಥಿಕ, ಸಾಮಾಜಿಕವಾಗಿ  ಸದೃಢರಾಗಲು ಶಿಕ್ಷಣದಿಂದ ವಂಚಿತರಾಗದಂತೆ  ಪ್ರೋತ್ಸಾಹಿಸಬೇಕೆಂದು ಜಿಲ್ಲಾಧಿಕಾರಿ ಎಂ.ಜಿ.  ಹಿರೇಮಠ ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲಚೇತನರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.   ವಿಕಲಚೇತನರಿಗಾಗಿ ಆಯೋಜಿಸಲಾಗಿದ್ದ  ಕ್ರೀಡೆ ಹಾಗೂ ಸಾಂಸ್ಕೃತಿಕ  ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 

ಸಮಾರಂಭದಲ್ಲಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ   ಅಕ್ಕಮಹಾದೇವಿ, ವಿಕಲಚೇತನರ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ಬಸಪ್ಪ,  ಎಲ್.ಎಮ್.ತಳಬಾಳ,  ಜಿ.ಪಿ ಪವಾರ, ವೀರೇಂದ್ರ ರಜಪೂತ, ನೀಲವ್ವ ದಾಸಪ್ಪನವರ, ಎನ್.ಎಸ್. ಗಡಿಗಿ, ಶ್ರೀನಾಥ ಕುಲಕರ್ಣಿ, ಆರ್.ಎನ್.ಶಿರಹಟ್ಟಿ, ನವಲೆ, ಕೆವಿ ಮುದ್ಲಾಫ್, ಎಸ್. ಎಫ್ ದಾಮನ್, ವಿಕಲಚೇತನರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು,    ವಿಕಲಚೇತನರ ಕ್ಷೇತ್ರದಲ್ಲಿ ಸೇವಾ ನಿರತ ಸಂಘ ಶಾಲೆಗಳ ಶಿಕ್ಷಕರು, ಸಂಸ್ಥೆಗಳು,  ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು, ವಿಕಲಚೇತನರುಗಳು  ಸಮಾರಂಭದಲ್ಲಿ  ಉಪಸ್ಥಿತರಿದ್ದರು.  

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಆಶು ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು  ಸ್ವಾಗತಿಸಿದರು.   ಡಿ.ಜಿ. ಕುಲಕರ್ಣಿ  ಕಾರ್ಯಕ್ರಮ ನಿರೂಪಿಸಿದರು.