ದಾಂಡೇಲಿ20: ಲೋಕದರ್ಶನ ವರದಿಯ ಫಲಶೃತಿ, ದಾಂಡೇಲಿ ನಗರದ ಕೋಗಿಲಬನ ಗ್ರಾಮದ ಬಳಿ ಇರುವ ಕಾಳಿ ನದಿಯ ಸೇತುವೆಯು ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. ಸೋಮವಾರ ಮುಸ್ಸಂಜೆ ವಿದ್ಯುತ್ ದೀಪಗಳನ್ನು ಪ್ರಪ್ರಥಮ ಬಾರಿಗೆ ಬೆಳಗಿಸಿದ ನಂತರ ನಗರದ ಜನತೆಯ ನ್ಯಾಯಯುತ ಕೂಗಿಗೆ ಸ್ಪಂದಿಸಿದ ನಗರಾಡಳಿತಕ್ಕೆ ಸಾರ್ವಜನಿಕರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಾಳಿ ನದಿಯ ಸೇತುವೆ ಸೌಂದರ್ಯವನ್ನು ಸವಿಯಲು ಸಾಕಷ್ಟು ಜನರು ಇತ್ತ ಕಡೆ ಧಾವಿಸುತ್ತಿರುವುದು ಕಂಡು ಬರುತ್ತಿದೆ ಇದರಿಂದ ಲೋಕದರ್ಶನ ಪತ್ರಿಕೆಯ ನ್ಯಾಯಯುತ ವರದಿಗೆ ಕೊನೆಗೂ ಜಯ ಸಿಕ್ಕಂತಾಗಿದೆ.