ಕಾಂಗ್ರೆಸ್ನಲ್ಲಿ ಉಸಿರುಗಟ್ಟುವ ವಾತಾವರಣ: ಬೇಸತ್ತು ರಾಜೀನಾಮೆ ನೀಡಿದ್ದೇನೆ- .ಬಾರ್ಕಿ

ರಾಣೇಬೆನ್ನೂರು14: ತಾಲೂಕು ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿಗಿನ ಉಸಿರುಗಟ್ಟಿಸುವ ವಾತಾವರಣದಿಂದ ಮನನೊಂದು, ಬೇಸರವಾಗಿ ಹಾವೇರಿ ಜಿಲ್ಲಾ ಎಸ್ಟಿ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತು ಕಾಂಗ್ರೆಸ್ನ ಪ್ರಾಥಮಿಕ ಅಧ್ಯಕ್ಷ ಸ್ಥಾನಕ್ಕೆ ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದೇನೆಂದು ಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಸಣ್ಣತಮ್ಮಪ್ಪ ಬಾರ್ಕಿ  ಹೇಳಿದರು.

  ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಕೆಬಿ ಕೋಳಿವಾಡರವರು ವೈಯಕ್ತಿಕವಾಗಿ ಉತ್ತಮರು, ಅಚರನ್ನು ಅಭಿನಂದಿಸುವೆ, ಆದರೆ ಅವರ ಹಿಂಬಾಲಕರು ಮಾತ್ರ ಸರಿಯಿಲ್ಲ, ಅವರುಗಳಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಸೋಲಬೇಕಾಯಿತು ಎಂದು ದೂರಿದರು.

   ಸಾರ್ವಜನಿಕ ಸೇವೆ ಮಾಡುವ ನನಗೆ ಕಾಂಗ್ರೆಸ್ನಲ್ಲಿ ಬೆಂಬಲವಿಲ್ಲ, ನನ್ನನ್ನು ಕಡೆಗಣಿಸಿದ್ದಾರೆ, ನನ್ನ ನಂಬಿದ ಕಾರ್ಯಕರ್ತರಿಗೂ ಸಹ ನೋವಾಗಿದೆ, ಈ ಬಗ್ಗೆ ಕೋಳಿವಾಡರವರಿಗೆ ಮತ್ತು ಆತ್ಮೀಯರಿಗೆ ತಿಳಿಸಿರುವೆ, ಕಾಂಗ್ರೆಸ್ ಪಕ್ಷದ ವ್ಯವಸ್ಥೆ ಇಲ್ಲಿ ಸರಿಯಿಲ್ಲ ಎಂಬುದನ್ನು ಹಾಗೂ ಅವರ ಹಿನ್ನಲೆಯುಳ್ಳ ನಾಯಕರು ಸರಿಯಿಲ್ಲ ಎಂಬುದನ್ನು ತಿಳಿಸಿರುವೆ ಏಂದರು.

   ಕಾಂಗ್ರೆಸ್ ಪಕ್ಷದಲ್ಲಿನ ಲೋಪದೋಷಗಳ ಬಗ್ಗೆ ಎಲ್ಲವನ್ನು ಕೋಳಿವಾಡರ ಮುಂದೆ ವಿವರಿಸಿರುವೆ. ಮುಂದೆ ರಾಜಕೀಯದಿಂದಲೂ ನಿವೃತ್ತಿಯಾಗಲು ಉತ್ಸುಕನಾಗಿದ್ದೇನೆ, ಈಗಾಗಲೇ ಪಕ್ಷದ ತಾಲೂಕು ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದು, ಮುಂದೆ ಯಾವ ಪಕ್ಷಕ್ಕೆ ಹೋಗಬೇಕೆನ್ನುವುದರ ಬಗ್ಗೆ ಯಾವುದೇ ತೀಮರ್ಾನ ಸದ್ಯ ಕೈಗೊಂಡಿಲ್ಲ ಎಂದು ಸ್ಪಷ್ಠಪಡಿಸಿದರು.