ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ


ಯಲಬುಗರ್ಾ: ಆಗ ತಾನೇ ಹುಟ್ಟಿದ ಮಗುವಿನ ಬದುಕು ಅಮ್ಮನ ಹಾಲು ಕುಡಿಯುವದರೊಂದಿಗೆ ಆರಂಭವಾಗುತ್ತೆ. ಅದುವೇ ಮಗುವಿನ ಬೆಳವಣಿಗೆಗೆ ನಾಂದಿ ಹಾಡುತ್ತದೆ. ಗರ್ಭದಿಂದ ಹೊರ ಜಗತ್ತಿಗೆ ಬಂದ ಹಸುಗೂಸನ್ನು ಸಲಹಿ ವಿವಿಧ ರೋಗಗಳಿಂದ ಮುಕ್ತಿ ನೀಡುತ್ತದೆ, ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರು ಹೇಳಿದರು. 

ತಾಲೂಕಿನ ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ತಾಯಿಯ ಎದೆ ಹಾಲೆ ಎಳೆಯ ಕಂದಮ್ಮನಿಗೆ ಸೋಪಾನವಾಗಿ ಬದುಕನ್ನು ಕಾಪಾಡುತ್ತದೆ ಇಂತಹ ಎದೆ ಹಾಲನ್ನು ಮಗು ಹುಟ್ಟಿದ ಒಂದು ತಾಸಿನ ಒಳಗೆ ನೀಡುವುದು ಪ್ರತಿ ಅಮ್ಮನ ಜವಾಬ್ದಾರಿಯಾಗಿದೆ ಆದ್ದರಿಂದ ಪ್ರತಿಯೊಬ್ಬ ತಾಯಿಯೂ ಕೂಡಾ ಮಗುವಿಗೆ ಹಾಲುಣಿಸುವದರಿಂದಾಗುವ ಉಪಯೋಗಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಹಾಲನ್ನು ಸರಿಯಾಗಿ ಉಣಿಸಿದ್ದೆ ಆದಲ್ಲಿ ಮಕ್ಕಳು ಯಾವುದೇ ಕಾರಣಕ್ಕು ಅಪೌಷ್ಠಿಕತೆಯಿಂದ ಬಳಲುವದಿಲ್ಲ ಎಂದರು.

ನಂತರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಗೀತಾ ಮಾತನಾಡಿ ತಾಯಿ ಎದೆ ಹಾಲು ಮಗುವಿಗೆ ಸಂಪೂರ್ಣ ಆಹಾರ, ಇದು ಸುಲಭವಾಗಿ ಜೀರ್ಣವಾಗುವ ಸ್ವಚ್ಛ, ಸುರಕ್ಷಿತ ಆಹಾರವಾಗಿದ್ದು, ಮಗುವಿನ ಬೆಳವಣಿಗೆಗೆ ಅತ್ಯವಶ್ಯಕ. ಅಲ್ಲದೇ  ತಾಯಿ ಮಗುವಿನ ಬಾಂದವ್ಯವನ್ನು ಹೆಚ್ಚಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಅವ್ವಕ್ಕ ಸುನ್ಯಾಳ ಮಾತನಾಡಿ ತಾಯಂದಿರರು ಹೆರಿಗೆ ಆದ ಆರು ತಿಂಗಳುವರೆಗು ತಾಯಿಯ ಎದೆ ಹಾಲಿನ ಜೊತೆಗೆ ಆರು ತಿಂಗಳ ನಂತರ ಪೂರಕ ಪೌಷ್ಠಕ ಆಹಾರದ ಜೊತೆಗೆ 2ವರ್ಷದವರೆಗೆ ಎದೆ ಹಾಲು ಮುಂದುವರೆಸಬೇಕು ಅದು ಮಕ್ಕಳನ್ನು ಜೀವನವಿಡಿ ಪೋಷಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷರಾದ ನಾಗಮ್ಮ ಕುದರಿಕೊಟಗಿ ಅಧ್ಯಕ್ಷತೆ ವಹಿಸಿದ್ದರು, ಕಿರಿಯ ಆರೋಗ್ಯ ಸಹಾಯಕರಾದ ಸುನೀಲಕುಮಾರ, ಸಾಹೇಬಣ್ಣ, ಸಮುದಾಯ ಆರೋಗ್ಯ ಅಧಿಕಾರಿ ಗೀತಾ, ಸೌಮ್ಯಾ ಎಸ್., ಪ್ರಕಾಶ ಎಮ್., ಪುನೀತ ಎ.ಎ., ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಮಕ್ಕಳ ತಾಯಂದಿರರು ಉಪಸ್ಥಿತರಿದ್ದರು. ಆಶಾ ಸುಗಮಕಾರರಾದ ಶಮಶಾದ ಬೇಗಂ ಪ್ರಾಥರ್ಿಸಿದರು. ಕಿರಿಯ ಆರೋಗ್ಯ ಸಹಾಯಕ ವೀರಭದ್ರಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.