ನವದೆಹಲಿ , ಮೇ 26,ಕರೋನ ತಡೆಗಟ್ಟಲು ಬಳಕೆ ಮಾಡುವ ಮಲೇರಿಯಾ ಔಷಧಿ ಹೈಡ್ರೋಕ್ಸಿಕ್ಲೋರೋಕ್ವಿನ್ ಪ್ರಯೋಗಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕ ತಡೆ ನಿರ್ಬಂದ ವಿಧಿಸಿದೆ.
ಕೊರೋನ ವಿರುದ್ಧದ ಹೋರಾಟದಲ್ಲಿ ಈ ಮಲೇರಿಯಾ ಔಷಧಿ ಬಳಸುವುದರಿಂದ ರೋಗಿಗಳು ಸಾವನ್ನಪ್ಪುವ ಅಪಾಯವೇ ಹೆಚ್ಚಾಗಿದೆ ಎಂದು ಕೆಲವು ಅಧ್ಯಯನ ವರದಿಗಳು ಸ್ಪಷ್ಟಪಡಿಸಿದ ನಂತರ ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ಮಹತ್ವದ ತೀರ್ಮಾನ ಹೊರಬಿದ್ದಿದೆ ಎಂದೂ ಹೇಳಲಾಗಿದೆ.