ಕೊರೊನಾಕ್ಕೆ ಬ್ರೆಜಿಲ್ ತತ್ತರ, ಒಂದೇ ದಿನ 15,800 ಪ್ರಕರಣ

ಮಾಸ್ಕೊ, ಮೇ 25,ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ 15,800 ಕೊರೊನಾ ಪ್ರಕರಣ ದಾಖಲಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 3,63,000ಕ್ಕೆ ಏರಿಕೆ ಆಗಿದೆ. ಅಮೆರಿಕಾ ದೇಶದ  ಜನರ  ಆರೋಗ್ಯ  ರಕ್ಷಣೆ  ಉದ್ದೇಶದಿಂದ ಅಧ್ಯಕ್ಷ  ಡೋನಾಲ್ಡ್  ಟ್ರಂಪ್ ಕಠಿಣ ನಿರ್ಧಾರ ಕೈಗೊಂಡಿದ್ದು, ಬ್ರೆಜಿಲ್ ನಲ್ಲಿ  14 ದಿನಗಳಿಗಿಂತ ಹೆಚ್ಚುದಿನಗಳ ಕಾಲ ತಂಗಿರುವ ಜನರು ಅಮೆರಿಕಾ ಪ್ರವೇಶಿಸುವುದನ್ನು  ನಿರ್ಬಂಧಿಸಿ ಆದೇಶಹೊರಡಿಸಿದ್ದಾರೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಪೀಡಿತರನ್ನು ಹೊಂದಿರುವ ಎರಡನೇ ದೇಶ ಬ್ರೇಜಿಲ್ ಆಗಿದೆ. ಕಳೆದ ಒಂದು ವಾರದಲ್ಲಿ ಬ್ರೆಜಿಲ್ ನಲ್ಲಿ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಮೃತರ ಸಂಖ್ಯೆ 22,716 ಸಂಖ್ಯೆ ಆಗಿದೆ. ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ದಕ್ಷಿಣ ಅಮೆರಿಕ ದೇಶವನ್ನು ಕೊರೊನಾ ವೈರಸ್ ನ ನೂತನ ಕೇಂದ್ರ ಎಂದು ಘೋಷಿಸಿತ್ತು.