ರಸಪ್ರಶ್ನೆ ಕಾರ್ಯಕ್ರಮದಿಂದ ಮೆದುಳಿನ ಕಸರತ್ತು: ಬಾಗೇವಾಡಿ

ಧಾರವಾಡ 21: ರಸಪ್ರಶ್ನೆ ಕಾರ್ಯಕ್ರಮವೆಂದರೆ ಮೆದುಳಿನ ಕಸರತ್ತು ಎಂದು ಖ್ಯಾತ ಅಭಿಯಂತಕ ಸುನಿಲ ಗಂಗಾಧರ ಬಾಗೇವಾಡಿ ನುಡಿದರು. 

ಅವರು ಭಾರತ ವಿಕಾಸ ಪರಿಷತ್ ಮಲಪ್ರಭಾ ಶಾಖೆ ಆಯೋಜಿಸಿದ್ದ ಭಾರತ್ ಕೋ ಜಾನೊ ರಸಪ್ರಶ್ನೆ ಕಾರ್ಯಕ್ರಮವನ್ನು ಶಿವಾಜಿ ಸರ್ಕಲ್ ಹತ್ತಿರವಿರುವ ಕೆ.ಇ.ಬೋಡರ್ಿನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಮಕ್ಕಳು ಮೋಬೈಲ್ ಗೀಳನ್ನು ಬಿಟ್ಟು ದಿನಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳನ್ನು                                                               ನೋಡುವುದರೊಂದಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯ, ಅಲ್ಲದೇ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಈ ರೀತಿ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ವಿಷಯ, ಇದರಿಂದ ಮಕ್ಕಳಲ್ಲಿ ನಮ್ಮ ದೇಶದ ಬಗ್ಗೆ ಅಭಿಮಾನ, ಸಂಸ್ಕೃತಿಯ ಅರಿವು, ಗೌರವ ಘನತೆ, ಬರಲು ಸಹಕಾರಿಯಾಗುತ್ತದೆ ಎಂದರು. 

ಭಾರತ ವಿಕಾಸ ಪರಿಷತನ ರಾಷ್ಟ್ರೀಯ ಉಪಾಧ್ಯಕ್ಷ ಜಗದೀಶ ಎಮ್. ಮಳಗಿ ಮಾತನಾಡಿ ಸ್ಪಧರ್ೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದರು. ಭಾರತ್ ವಿಕಾಸ ಪರಿಷತ್ ಹಳ್ಳಿಗಳನ್ನು ದತ್ತು ಪಡೆದು ಹಂತ ಹಂತವಾಗಿ ಇಪ್ಪತ್ತೈದು ಲಕ್ಷ ರೂ.ಗಳ ಮೂಲಭೂತ ಸೌಕರ್ಯ ನೀಡುತ್ತಿದ್ದು, ಈಗಾಗಲೇ 3600 ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಖ್ಯಾತ ಅಭಿಯಂತಕ ಸುನಿಲ ಬಾಗೇವಾಡಿ ಅವರು ಲೈನ್ ಬಜಾರ್ ಹನುಮಾನ ಗುಡಿಯ ಜೀಣರ್ೋದ್ಧಾರ ಕೆಲಸ ಮಾಡಿದ್ದು ಎಲ್ಲರ ಗಮನ ಸೆಳೆದ ವಿಷಯ, ಕನರ್ಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಜಾಂಬೋಟಿ ಹಳ್ಳಿಯ ಸಕರ್ಾರಿ ಶಾಲೆಯ ಮೂರು ಗೋಡೆಗಳನ್ನು ಹಾಗೂ ಹೆಣ್ಣು ಮಕ್ಕಳಿಗಾಗಿ ಶೌಚಾಲಯ ನಿಮರ್ಿಸಲು ಭಾರತ್ ವಿಕಾಸ ಪರಿಷತ್ನೊಂದಿಗೆ ಸಹಕರಿಸಿದ್ದಾರೆ ಎಂದರು.

ಕ್ವೀಜ್ ಮಾಸ್ಟರ ಅಗಿ ಮಕ್ಳಳಿಗೆ ಪ್ರಶ್ನೆ ಕೇಳಲು ರಾಜೇಶ್ವರಿ ಶಿಂಧೆ, ಶ್ರೀಲಕ್ಷ್ಮಿ ಹಾಗೂ ಸುಮನ್ ಘಂಟೆನ್ನವರ ಆಗಮಿಸಿದ್ದರು.

ಕೆ.ಇ.ಬೋರ್ಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಂಶುಪಾಲ

ಎಮ್.ಎ.ಸಿದ್ಧಾಂತಿ, ಮಲಪ್ರಭಾ ಶಾಖೆಯ ಅಧ್ಯಕ್ಷ ಶಿರೀಶ ಮನೂರಕರ, ಮಹಿಳಾ  ಮತ್ತು ಬಾಲವಿಕಾಸ ರಾಷ್ಟ್ರೀಯ ಕಾರ್ಯದಶರ್ಿ ಡಾ. ಸುನೀತ ಪುರೋಹಿತ, ಅಶೋಕ  ಮೂತರ್ಿ, ವಾಸುದೇವ ಕುಲಕಣರ್ಿ,  ಶೈಲಾ ಕರಗುದರಿ, ಡಾ.ಅವಿನಾಶ ದೊಡಮನಿ,  ವಿಜಯಲಕ್ಷ್ಮಿ ಬಾರೆಕರ, ಶಾಲಿನಿ ಶಿವಪೂಜಿ, ಇಂದಿರಾ ಮಳಗಿ, ವಿಜಯಲಕ್ಷ್ಮೀ ಪಾಟೀಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಆನಂದ ಯಲಿಗಾರ, ಶಿವು ಗಾಯಕವಾಡ ತಂತ್ರಜ್ಞಾನ ಸಹಾಯಕರಾಗಿ ಕೆಲಸ ನಿರ್ವಹಿಸಿದರು. 

ಕನ್ನಡ ಕಿರಿಯರ ವಿಭಾಗದಲ್ಲಿ ( 6ನೇ ಇಯತ್ತೆಯಿಂದ 8 ನೇ ಇಯತ್ತೆವರೆಗೆ)  ಪ್ರಥಮ ಸ್ಥಾನ ಗರಗದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ದ್ವೀತಿಯ ವಿದ್ಯಾರಣ್ಯ ಹೈಸ್ಕೂಲ, ತೃತೀಯ ಸ್ಥಾನ ಮಾಳಮಡ್ಡಿಯ ಕೆ,ಇ.ಬೋಡ್ ಸೆಂಟ್ರಲ್ ಸ್ಕೂಲ, ಚತುರ್ಥ ಪ್ರಜೆಂಟೆಶನ್ ಕನ್ನಡ ಪ್ರೈಮರಿ ಸ್ಕೂಲ, ಕನ್ನಡ ಹಿರಿಯರ ವಿಭಾಗ ( 8 ನೇ ಇಯತ್ತೇ ಯಿಂದ ದ್ವೀತಿಯ ಪಿಯುಸಿ ವರೆಗೆ), ಪ್ರಥಮ ಸ್ಥಾನ ರಾಷ್ಟ್ರೋತ್ತಾನ ವಿದ್ಯಾಕೇಂದ್ರ, ದ್ವೀತಿಯ ಮಳಮಡ್ಡಿಯ ಕೆ.ಇ.ಬೋರ್ಡ ಸೆಂಟ್ರಲ್ ಸ್ಕೂಲ, ತೃತೀಯ ಕೆ.ಇ.ಬೋರ್ಡ ಕಲಾ ಮತ್ತು ವಾಣಿಜ್ಯ, ಪ್ರಥಮ ದಜರ್ೆಯ ಕಾಲೇಜು, ಚತುರ್ಥ ವಿದ್ಯಾರಣ್ಯ ಹೈಸ್ಕೂಲ,  

ಇಂಗ್ಲೀಷ್ ಕಿರಿಯರ ವಿಭಾಗ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ದ್ವಿತೀಯ ಬಾಸೆಲ್ ಮಿಷನ್ ಇಂಗ್ಲೀಷ ಮಿಡಿಯಮ್ ಸ್ಕೂಲ, ತೃತೀಯ ಕ್ಲಾಸಿಕ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ, ಚತುರ್ಥ ಮಾಳಮಡ್ಡಿಯ ಕೆ.ಇ.ಬೋರ್ಡ ಇಂಗ್ಲೀಷ ಮಿಡಿಯಮ್ ಸ್ಕೂಲ, ಇಂಗ್ಲೀಷ ಹಿರಿಯರ ವಿಭಾಗದಲ್ಲಿ ಪ್ರಥಮ ಕ್ಲಾಸಿಕ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ, ದ್ವಿತೀಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ತೃತೀಯ ಬಾಸೆಲ್ ಮಿಷನ್ ಇಂಗ್ಲೀಷ ಮಿಡಿಯಮ್ ಸ್ಕೂಲ, ಚತುರ್ಥ ಮಾಳಮಡ್ಡಿಯ ಕೆ.ಇ.ಬೋರ್ಡ ಇಂಗ್ಲೀಷ ಮಿಡಿಯಮ್ ಸ್ಕೂಲ, ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳನ್ನು ನವ್ಹಂಬರ್ 10 ರಂದು ಗಂಗಾವತಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ವಿಜ್ ರಸಪ್ರಶ್ನೆ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುತ್ತಾರೆ.

ವಂದೇ ಮಾತರಂ ಮೈತ್ರಿ  ದೀಪ್ತಿ ಘಂಟೆನ್ನವರ, ಕಾರ್ಯಕ್ರಮ ನಿರೂಪಣೆ ವೆಂಕಟೇಶ ಶಿವಪೂಜಿ, ಸ್ವಾಗತ ಶಿವಕುಮಾರ ಬಾರೆಕರ, ಅತಿಥಿಗಳ ಪರಿಚಯ ಅಭಿಷೇಕ.ಬಿ, ಕಾರ್ಯಕ್ರಮದ ವಂದನಾರ್ಪಣೆ ಶ್ರೀಧರ ಕುಲಕಣರ್ಿ ಮಾಡಿದರು.