ಡಿಸೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ ಬ್ರಹ್ಮಾಸ್ತ್ರ

ಮುಂಬೈ, ಫೆ 3 :     ಇದೇ ಮೊದಲ ಬಾರಿಗೆ ಬಾಲಿವುಡ್ ರಾಕ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಆಲಿಯಾ ಜೋಡಿಯಲ್ಲಿ ತೆರೆಕಾಣಲಿರುವ ಬ್ರಹಾಸ್ತ್ರ ಚಿತ್ರ ಡಿ.04 ರಂದು ಬಿಡುಗಡೆಗೊಳ್ಳಲಿದೆ. 

ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಈ ಚಿತ್ರಕ್ಕೆ ಕೈ ಜೋಡಿಸಿದ್ದು, ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಮುಖ್ಯಭೂಮಿಕೆಯಲ್ಲಿದ್ದಾರೆ. 

ಬ್ರಹ್ಮಾಸ್ತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದ್ದು,  ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಪಂಚ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಕರಣ್ ಜೋಹರ್ ತಮ್ಮ ಟ್ವೀಟರ್ ಖಾತೆಯಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ನಿರ್ದೇಶಕ ಆಯಾನ್ ಮುಖರ್ಜಿ ಜೊತೆಗಿನ ಕ್ಯಾಂಡಿಡ್ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.  ಅದರಲ್ಲಿ ಡಿಸೆಂಬರ್ 2020ಎಂದು ನಮೂದಿಸಿರುವ ಬೋರ್ಡ್ ವೊಂದನ್ನು ಕೈಯಲ್ಲಿ ಹಿಡಿದಿದ್ದಾರೆ. 

ಅಲ್ಲದೇ, ಈ ಚಿತ್ರವು ಹಿಂದಿ,ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಗೊಳ್ಳಲಿದೆ ಎಂದು ಕರಣ್ ಘೋಷಿಸಿದ್ದಾರೆ.