ಮೌಂಟ್ ಅಬು, ಮಾ 27, ಬ್ರಹ್ಮಕುಮಾರಿ ಸಂಘಟನೆಯ ಮುಖ್ಯಸ್ಥೆ ರಾಜಯೋಗಿನಿ
ದಾದಿ ಜಾನಕಿ ವಿಧಿವಶರಾಗಿದ್ದಾರೆ. 104 ವರ್ಷ ವಯಸ್ಸಿನ ಅವರು ಖಾಸಗಿ ಆಸ್ಪತ್ರೆಯಲ್ಲಿ
ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. "ಪ್ರೀತಿಯ ಚಿಂತನೆಗಳೊಂದಿಗೆ, ಬ್ರಹ್ಮ
ಕುಮಾರೀಸ್ ನ ಆಧ್ಯಾತ್ಮಿಕ ಮುಖ್ಯಸ್ಥರಾದ ನಮ್ಮ ಪ್ರೀತಿಯ ದಾದಿ ಜಾನಕಿ ಶುಕ್ರವಾರ
ನಸುಕಿನ 2 ಗಂಟೆಗೆ ಈ ಭೌತಿಕ ಜೀವನದಿಂದ ಹೊರನಡೆದಿದ್ದಾರೆ" ಎಂದು ಅವರ ಟ್ವಿಟರ್
ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಸ್ವಚ್ಛ ಭಾರತದ ರಾಯಭಾರಿಯೂ ಆಗಿದ್ದ ಅವರ ಪಾರ್ಥಿವ
ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಶಾಂತಿವನದಲ್ಲಿ ಇರಿಸಲಾಗಿದೆ. ಮಧ್ಯಾಹ್ನ
3.30ಕ್ಕೆ ಅಂತಿವ ವಿಧಿವಿಧಾನಗಳು ನೆರವೇರಲಿದೆ ಎಂದು ತಿಳಿಸಲಾಗಿದೆ