ಬ್ರಾಹಣ ಸಮಾಜ ಸಂಘದ ಪದಾಧಿಕಾರಿಗಳು ಪ್ರತಿಭಟನೆ
ರಾಣಿಬೆನ್ನೂರ 21: ಬಿದರ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹಣ ವಿಧ್ಯಾರ್ಥಿಯ ಜನಿವಾರ ತಗಿಯಿಸಿ ಅವಮಾನ ಮಾಡಿದ ಘಟನೆ ಖಂಡಿಸಿ, ಬ್ರಾಹಣ ಸಮಾಜ ಸಂಘದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಆರ್ ಎಸ್,ಭಗವಾರ ಅವರ ಮೂಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಿದರ ಹಾಗೂ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿಧ್ಯಾರ್ಥಿ ಪರೀಕ್ಷೆ ಬರೆಯಲು ಬಂದಾಗ ಆತನ ಜನಿವಾರ ಕಿತ್ತು ತುಂಡರಿಸಿದ್ದು ಅಲ್ಲದೆ ಬ್ರಾಹ್ಮಣ ಸಮಾಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ವರ್ತಿಸಿದ ಘಟನೆಯು ಖೇದಕರದ ಸಂಗತಿಯಾಗಿದೆ. ಶಿವದಾರ, ಜನಿವಾರಗಳು ಧಾರ್ಮಿಕ ಸಂಕೇತಗಳು ಆಗಿವೆ. ಗಾಯಿತ್ರಿ ಮಂತ್ರದ ದೀಕ್ಷೆಯಿಂದ ಪಡೆದ ಜನಿವಾರವು ಆತ್ಮಸಾಕ್ಷತ್ಕಾರದ ಪರಮ ಸಂಕಲ್ಪ ಮಾಡಿದ್ದ ವಿಧ್ಯಾರ್ಥಿಯ ಜನಿವರ ಬಿಚ್ಚಿಸಿದ ಅವಮಾನಕಾರಿ ಘಟನೆಯೂ ನೀಜವಾಗಲು ಖಂಡನೀಯ ವಾಗಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಆಧ್ಯಯನ ಮಾಡಿ ಭಾವಿ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದವಿಧ್ಯಾರ್ಥಿಯ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ಸಮಾಜದ ವಿರೋಧಿಯಾಗಿದೆ. ಸರಕಾರ ಈಕೂಡಲೆ ಹಿಂದೂ ಧರ್ಮದ ಪರಂಪರೆಯ ಸಂಸ್ಕಾರವಾದ ಗಾಯಿತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ, ಘನತೆ ,ಗೌರವಗೊತ್ತಿಲ್ಲದ ಧರ್ಮ ವಿರೋದಿ ಕೃತ್ಯ ಎಸಗಿರುವ ಹೀನ ಅಧಿಕಾರಿಗಳ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಗುರುರಾಜ. ಶಿರಹಟ್ಟಿ , ಸತೀಶ. ಹೊಳಬಾಗಿಲ, ಸುದೀರ ನಾಯ್ಕ, ನಾಗರಾಜ ಕುಲ್ಕರ್ಣಿ, ಶಂಕರ್ ನಾಯ್ಕ, ಧಿರೇಂದ್ರ ಪಂಚಭಾವಿ, ಚಿದಂಬರ ಜೋಶಿ, ನಾಗರಾಜ ಜೋಶಿ, ಗುರುಮೂರ್ತಿ ದಿಕ್ಷೀತ, ಉಮೇಶ. ಹರಿಭಟ್ಟ, ಆರ್.ಕೆ. ದೇಶಪಾಂಡೆ, ವಿನಾಯ ಜೋಶಿ, ಹರೀಶ ನಾಯ್ಕ ಗೋಪಾಲ ಜೋಶಿ, ರಮೇಶ ಕುಲ್ಕರ್ಣಿ ಮುಂತಾದವರು ಇದ್ದರು.