ಸವಸುದ್ದಿಯಲ್ಲಿ ಅರಳಿದ ಬ್ರಹ್ಮ ಕಮಲ

ಸವಸುದ್ದಿಯಲ್ಲಿ ಅರಳಿದ ಬ್ರಹ್ಮ ಕಮಲ Brahma Kamal blooms in Savasuddi

ಪಾಲಬಾವಿ 14 : ಸಮೀಪದ ಸವಸುದ್ದಿ ಗ್ರಾಮದ ವ್ಯಾಪಾರಸ್ಥರಾದ ದೀಲೀಪ್ ಅಂಕಲೆ ಅವರ ಮನೆಯಲ್ಲಿ ಹೂದೋಟದಲ್ಲಿ ಆಗಸ್ಟ್‌ 13 ರಂದು ರಾತ್ರಿ 11:30ಕ್ಕೆ ಹೂಗಳಲ್ಲಿ ಅತಿ ಶ್ರೇಷ್ಠವಾಗಿರುವ "ಬ್ರಹ್ಮ ಕಮಲ" ವು ಮನಮೋಹಕವಾಗಿ ಅರಳಿ ನಿಂತಿದೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಅರಳಿದ ಈ ಬ್ರಹ್ಮ ಕಮಲ ಹೂವಿನ ಗಿಡಕ್ಕೆ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿದರು.ಫೋಟೊ : ಸವಸುದ್ದಿ ಗ್ರಾಮದ ದೀಲೀಪ್ ಅಂಕಲೆ ಅವರ ಹೂದೋಟದಲ್ಲಿ ಅರಳಿದ ಬ್ರಹ್ಮ ಕಮಲ ಮನಮೊಹಕವಾಗಿದೆ.