ಬಾಲಕ ಕಾಣೆ: ಅಪಹರಣ ಶಂಕೆ
Boy missing: Kidnapping suspected
ಕೊಪ್ಪಳ 04 : ಕೊಪ್ಪಳ ನಗರದ ಮಿಟ್ಟಿಕೇರಿ ಓಣಿಯ ನಿವಾಸಿ ನಾಲ್ಕು ವರ್ಷದ ಮಹ್ಮದ್ ಅರ್ಮಾನ್ ತಂದೆ ಸಾಧಿಕಅಲಿ ಅಳವಂಡಿ ಎಂಬ ಬಾಲಕ ಸೆಪ್ಟೆಂಬರ್ 2ರ ಮಂಗಳವಾರದಂದು ಕಾಣೆಯಾಗಿದ್ದು, ಬಾಲಕನ್ನು ಅಪಹರಣ ಮಾಡಿರುವ ಸಾಧ್ಯತೆಗಳಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಹ್ಮದ್ ಅರ್ಮಾನ್ ಎಂಬ ಬಾಲಕ ಸೆ. 2ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಹೊರಗಡೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದು, ಪಾಲಕರು ತಮ್ಮ ಓಣಿ ಮತ್ತು ತಮ್ಮ ಸಂಬಂಧಿಕರು ವಾಸವಿರುವ ಏರಿಯಾಗಳಲ್ಲಿ ಹುಡುಕಿದ್ದರೂ ಸಹ ಬಾಲಕನು ಸಿಕ್ಕಿರುವುದಿಲ್ಲ. ಬಾಲಕನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರಬಹುದು ಎಂದು ಕಾಣೆಯಾದ ಬಾಲಕನ ಪೋಷಕರು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಠಾಣಾ ಗುನ್ನೆ ನಂ: 85/2025 ಕಲಂ: 137(2) ಬಿ.ಎನ್.ಎಸ್ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಬಾಲಕನ ಚಹರೆ ವಿವರ: ಮಹ್ಮದ್ ಅರ್ಮಾನ್ ತಂದೆ ಸಾಧಿಕಅಲಿ ಅಳವಂಡಿ ವಯಸ್ಸು 4 ವರ್ಷ, ಎತ್ತರ 2.5 ಫೀಟ್, ಬಿಳಿ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಸಾದಾ ಹಸಿರು ಬಣ್ಣದ ಟಿ ಶರ್ಟ್ ಮತ್ತು ಚಾಕಲೇಟ್ ಕಲರ್ ಪ್ಯಾಂಟ್ ಧರಿಸಿದ್ದನು.
ಕಣೆಯಾದ ಬಾಲಕನು ಎಲ್ಲಿಯಾದರು ಕಂಡುಬಂದಲ್ಲಿ ಅಥವಾ ಈ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ದೂ.ಸಂ: 08539-221233, ಪಿ.ಐ ಮೊ.ಸಂ: 8861116999, ತನಿಖಾಧಿಕಾರಿ ಶಶಿಕಲಾ ಮೊ.ಸಂ: 8217391502 ಹಾಗೂ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ ಮೊ.ಸಂ: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 