ಸಂಗಮೇಶ್ವರ್ ಪ್ರೌಢಶಾಲೆ: ಶಾಲಾ ಸಂಸತ್ ಚುನಾವಣೆ
Sangameshwar High School: School Parliament Election
ಲೋಕದರ್ಶನ ವರದಿ
ತಾಳಿಕೋಟಿ 01: ಪಟ್ಟಣದ ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ 2026-2027ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು.ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಅರಿವು ಮೂಡಿಸುವ ಕುರಿತು ತಂತ್ರಜ್ಞಾನ ಬಳಸಿ ಮತದಾನ ನಡೆಸಲಾಯಿತು.ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತದಾನ ಹೇಗೆ ಮಾಡುವುದು ಎಂದು ಪ್ರೌಢಶಾಲೆಯ ಶಿಕ್ಷಕ ಎಸ್.ವಿ.ಜಾಮಗೊಂಡಿ ವಿವರಿಸಿದರು.ಮತಗಟ್ಟೆ ಅಧಿಕಾರಿಯಾಗಿ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ ಕಾರ್ಯ ನಿರ್ವಹಿಸಿದರು. ಮತದಾನ ಮತಗಟ್ಟೆ ಸಹಾಯಕರಾಗಿ ಸಿಬ್ಬಂದಿಗಳಾದ ಎಸ್.ಸಿ.ಗುಡಗುಂಟಿ, ಬಿ.ಆಯ್.ಹಿರೇಹೊಳಿ,ಎಮ್.ಎಸ್.ರಾಯಗೊಂಡ, ಯು.ಎಚ್.ಗಟನೂರ,ಸಿದ್ದನಗೌಡ ಮುದನೂರ, ಸುನೀಲ ಮತ್ತಿಗಟ್ಟಿ, ರೇಣುಕಾ ಬಿರಾದಾರ ಕಾರ್ಯ ನಿರ್ವಹಿಸಿದರು.
ಮತದಾನ ಕಾರ್ಯ ಮುಗಿದ ಮೇಲೆ ಮತ ಎಣಿಕೆ ಕಾರ್ಯ ನಡೆಯಿತು ಮತ ಎಣಿಕೆ ಕಾರ್ಯ ಶಿಕ್ಷಕ ಬಿ.ಆಯ್.ಹಿರೇಹೊಳಿ ನಡೆಸಿದರು.8ನೇ ತರಗತಿಯ ವರ್ಗ ಪ್ರತಿನಿಧಿಗಳಾಗಿ ಗಣೇಶ ನೆ.ರಾಠೋಡ,ಲಕ್ಷ್ಮಿ ಚೌವಾಣ, 9ನೇ ತರಗತಿ ವರ್ಗ ಪ್ರತಿನಿಧಿಯಾಗಿ ಅಬೂಬಕರ ಶೇಖ, ಸಪ್ನಾ ಡಿ.ಜಾಧವ,10ನೇ ತರಗತಿ ವರ್ಗ ಪ್ರತಿನಿಧಿಯಾಗಿ ಪುಟ್ಟರಾಜ ರಾಠೋಡ, ಚಂದ್ರಕಲಾ ದ್ಯಾಸರ, ಜಿ.ಎಸ್ ಗಳಾಗಿ ರಾಹುಲ.ರಾಠೋಡ, ಮತ್ತು ಲಲಿತಾ ಚೌವಾಣ ಆಯ್ಕೆಯಾದರು.ಆಯ್ಕೆಯಾದ ಎಲ್ಲಾ ಪ್ರತಿನಿಧಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕರಾದ ಎಚ್.ಎಸ್.ಪಾಟೀಲಕಾರ್ಯದರ್ಶಿಗಳಾದ ಸಚಿನ ಎಚ್.ಪಾಟೀಲ ಆಡಳಿತಾಧಿಕಾರಿ ಕಿರಣ ಎಚ್.ಪಾಟೀಲ ಪ್ರೌಢಶಾಲೆಯ ಮುಖ್ಯಸ್ಥ ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 