ಮಳೆಗೆ ಆಹುತಿಯಾದ ಗೋವಿನ ಜೋಳ

ಲೋಕದರ್ಶನ ವರದಿ

ಕಡಬಿ 10: ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಗಳಿಹಾಳ, ಮೇಳ್ಳಿಕೇರಿ ಹಾಗೂ ದಾಸನಾಳ, ಮಾಡಮಗೇರಿ, ತಾವಲಗೇರಿ, ಗ್ರಾಮಗಳಲ್ಲಿ ಅಕಾಲಿಕ ಸುರಿದ ಅತಿವೃಷ್ಟಿ ಮಳೆಗೆಯಿಂದಾಗಿ ಗೋವಿನ ಜೋಳ, ತೋಗರಿ, ಜೋಳ, ಮುಂತಾದ ಬೆಳೆಗಳು ಮಳೆಯ ಅಬ್ಬರಕ್ಕೆ ಗ್ರಾಮದ ನಾನಾ ಕಡೆ ಬೆಳೆ ನಾಶವಾಗಿದೆ. ಈ ವರೆಗೆ ಬೆಳೆ ಪರಿಹಾರಕ್ಕೆ ಯಾವ ಅಧಿಕಾರಿಗಳು ಮುಗಳಿಹಾಳ ಗ್ರಾಮಕ್ಕೆ ಬಂದು ಸರಿಯಾಗಿ ಬೇಟಿ ನೀಡಿಲ್ಲಾ.

ಮುಗಳಿಹಾಳ ಗ್ರಾಮದ ಭೀಮಶೇಪ್ಪ ಮಲ್ಲಪ್ಪ ದಳವಾಯಿ ಇವರ ಸರ್ವೇ ನಂ 54/3 ಇದ್ದ 4 ಎಕರೆ 27 ಗುಂಟೆ  ಜಮೀನಿನಲ್ಲಿ ರೈತ ಭೂತಾಯಿ ನಂಬಿ ಗೋವಿನ ಜೋಳ ಬೆಳೆದಿದ್ದ ಆದರೆ ಮಳೆರಾಯನ ಅಬ್ಬರಕ್ಕೆ ಗೋವಿನ ಜೋಳ ನೇಲಕ್ಕೆ ಬಿದ್ದು ಬೆಳೆ ನಾಶವಾಗಿದೆ. ಇದ್ದ 4 ಎಕರೆ 27 ಗುಂಟೆ ಜಮೀನು ಇಳಿಜಾರು ಪ್ರದೇಶ ಇದದ್ದನ್ನು ಸಮತಟ್ಟು ಪ್ರದೇಶ ಮಾಡಲು ಜೆಸಿಬಿ ಮತ್ತು ಆಳುಗಳನ್ನು ಹಚ್ಚಿ ಭೂಮಿ ಸಮತಟ್ಟಾಗಿ   ಮಾಡಿ  ಬೆಳೆಬೆಳೆಯಲು ಬ್ಯಾಂಕಗಳಿಂದ 3 ಲಕ್ಷ ಹಣ ಸಾಲಮಾಡಿದ್ದ  ಬೀಜ, ಗೋಬ್ಬರ, ಆಳುಗಳಿಗೆ ಅಂದಾಜು ಖರ್ಚು  30 ಸಾವಿರ ಹಣ ತೊಡಗಿಸಿ ಗೋವಿನ ಜೋಳ ಬಿತ್ತನೆ ಮಾಡಿದ್ದಾನೆ. ಮಳೆರಾಯನ ಆವಾಂತರಕ್ಕೆ ಮಳೆಯ ನೀರು ಇದುವರೆಗೂ ಹೋಲದ ತುಂಬೆಲ್ಲಾ ನೀರು ನಿಂತು ಹರಿಯುತ್ತಿದೆ.  

ಗೋವಿನ ಜೋಳ ಬೆಳೆಯು 4 ತಿಂಗಳ ಬೆಳೆಯಾಗಿದ್ದು ರೈತರು ಅಪಾರ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆಬೆಳೆದು ಬೆಗನೆ ಸಾಲ ತಿರಿಸಬೇಕೆಂದು ಕನಸು ಕಾನುತ್ತಿರುವಾಗ ಬೀಜ ನಾಟಿ ಮಾಡಿ 3 ತಿಂಗಳಲ್ಲಿ ಅನಾವೃಷ್ಟಿ ಮಳೆಗೆ ತೋಟದ ತುಂಬೆಲ್ಲಾ ನೀರು ನಿಂತ್ತು ಇನೆನು 1 ತಿಂಗಳು ಗತಿಸಿದ್ದರೆ ಸಂಪೂರ್ಣವಾಗಿ ಬೆಳೆದ ಬೆಳೆಗಳು ರೈತನ ಕೈಗೆ ಸಿಗುತ್ತಿತ್ತು ಆದರೆ ದುರದುಷ್ಟವಶಾತ 1 ಲಕ್ಷ 40 ಸಾವಿರ ಲಾಭವನ್ನು ಮಳೆರಾಯ ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ಮಾಡಿ ರೈತನ ಕನಸು ನುಚ್ಚುನೂರಾಗಿಸಿ ಬಿಟ್ಟಿದಾನೆ. 

ಮಳೆರಾಯನ ಅನಾವೃಷ್ಟಿಯಿಂದ ಗೋವಿನ ಜೋಳ ಬೆಳೆಗಳು ಮುಗಳಿಹಾಳ, ಮೇಳ್ಳಿಕೇರಿ, ದಾಸನಾಳ, ಕೋಡ್ಲಿವಾಡ, ತಾವಲಗೇರಿ, ಕುರಬಗಟ್ಟಿ, ಯರಘಣವಿ, ಮಾಡಮಗೇರಿ, ಕಡಬಿ, ಗೊರಗುದ್ದಿ ಗ್ರಾಮಗಳ ರೈತರ ಹೋಲದಲ್ಲಿ ಬೇಳೆದ ಬೇಳೆಗಳು ತುಂಬಾ ನಾಶಹೊಂದಿವೆ ಗ್ರಾಮದ ಹಾಗೂ ಸುತ್ತುಮುತ್ತಲಿನ ಇನ್ನೂ ಹಲವಾರು ರೈತರ ಬೇಳೆ ನಾಶದಿಂದಾಗಿ ಸಂಕಷ್ಟಕ್ಕಿಡಾಗಿದ್ದಾರೆ ತಕ್ಷಣ ಪರಿಹಾರ ಒದಗಿಸಬೇಕೆಂದು ರೈತರು ಆಘ್ರಹಿಸಿದ್ದಾರೆ.