ಶಿವಮೊಗ್ಗ, ಅ 5: ಶನಿವಾರ ಶಾಲೆ ಮುಗಿಸಿ ಈಜಲೆಂದು ಕೆರೆಗೆ ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಶಿರಾಳಕೊಪ್ಪ ಸಮೀಪ ಘಟನೆ ನಡೆದಿದೆ.
ಅದೇ ಗ್ರಾಮದ ಶಂಭು (14) ಹಾಗೂ ಉದಯ್ (15) ಮೃತ ದುದರ್ೆವಿಗಳು. ಇವರಿಬ್ಬರೂ ಸೇರಿ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಬೆಲವಂತನಕೊಪ್ಪ ಗ್ರಾಮದ ನಡುವಲಕಟ್ಟೆ ಕೆರೆಗೆ ಈಜಲೆಂದು ತೆರಳಿದ್ದರು.
ಕೆರೆಯ ಆಳ ತಿಳಿಯದೇ ವಿದ್ಯಾರ್ಥಿಗಳು ನೀರಿಗಿಳಿದ ಪರಿಣಾಮ ದುರಂತ ಈ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.