ಜಕಾರ್ತ 25: ಏಷಿಯನ್ ಗೇಮ್ಸ್ 2018 ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕನರ್ಾಟಕ ಮೂಲಕ ರೋಹನ್ ಬೋಪಣ್ಣ ಅವರು ಪದಕವನ್ನು ಕೊಡಗು ನೆರೆ ಸಂತ್ರಸ್ತರಿಗೆ ಅಪರ್ಿಸಿದ್ದಾರೆ.
ಮೂಲತಃ ಕೊಡಗಿನವರೇ ಆಗಿರುವ ರೋಹನ್ ಅವರು, ಜಕಾರ್ತದಲ್ಲಿದ್ದರೂ ನನ್ನ ಮನಸ್ಸು ಕೊಡಗಿನಲ್ಲಿಯೇ ಇದೆ. ಕುಟುಂಬ, ಸ್ನೇಹಿತರಿಕೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದೇನೆ. ಬಹಳ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ಬೋಪಣ್ಣ ಅವರು ದಿವಿಜ್ ಅವರ ಜೊತೆಗಿನ ಡಬಲ್ಸ್ ಟೆನ್ನಿಸ್ ನಲ್ಲಿ ನಿನ್ನೆಯಷ್ಟೇ ಚಿನ್ನದ ಪದಕ ಗೆದ್ದಿದ್ದರು. ಇದೀಗ ಪದಕವನ್ನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಸಮಪರ್ಿಸಿದ್ದಾರೆ.
ಕನರ್ಾಟಕ ಜನರ ಪ್ರೀತಿ, ಕೊಡಗಿನ ಜನರು ತೋರಿಸಿದ ಅಕ್ಕರೆಯಿಂದ ನಾನು ಪದಕ ಗೆಲ್ಲುವುದು ಸಾಧ್ಯವಾಗಿದ್ದು, ಹಾಗಾಗಿ ಈ ಪದಕವನ್ನು ಅವರಿಗೆ ಅಪರ್ಿಸುತ್ತಿದ್ದೇನೆಂದು ಬೋಪಣ್ಣ ಅವರು ಹೇಳಿದ್ದಾರೆ.