ಪುಸ್ತಕಗಳು ಪ್ರತಿಷ್ಠೆಯ ವಸ್ತುವಾಗಬೇಕು: ಡಾ. ಮಾನಸ

ಪುಸ್ತಕಗಳು ಪ್ರತಿಷ್ಠೆಯ ವಸ್ತುವಾಗಬೇಕು: ಡಾ. ಮಾನಸ Books should become a status symbol: Dr. Manasa

ಬೆಳಗಾವಿ ೨೪ : ಗ್ರಂಥಾಲಯವೆAದರೆ ಕೇವಲ ಪುಸ್ತಕಗಳ ಸರಕಲ್ಲ. ನಮ್ಮ ದೇಹದೊಳಗಿನ ಆತ್ಮದಂತೆ. ಅವು ನಮ್ಮ ಮನೆಯ ಸತ್ವ. ಆದುದರಿಂದ ಪುಸ್ತಕಗಳು ನಾಗರೀಕ ಬದುಕಿನ ಪ್ರತಿಷ್ಠೆಯ ವಸ್ತುವಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು. 

ಅವರಿಂದು ಮಹಾಂತೇಶ ನಗರದಲ್ಲಿನ ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಅವರ ಸ್ವಗೃಹದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಲೆ ಕಾಲೇಜು ಊರು ನಗರಗಳಲ್ಲಿ ಗ್ರಂಥಾಲಯವಿದ್ದರೆ ಅವು ಜೀವಂತಿಕೆಯಿAದ ಇವೆ ಎಂದರ್ಥ. ಜ್ಞಾನ ಸಂಪನ್ನ ಗ್ರಂಥಗಳು ಗ್ರಂಥಾಲಯಕ್ಕೆ ಘನತೆ ತರುತ್ತವೆ. ಇಂತಹ ಘನತೆ ತರುವ ಗ್ರಂಥಾಲಯಗಳು ಪ್ರತಿ ಮನೆಯಲ್ಲೂ ಇರಬೇಕು. ಅವು ಮೂಲಭೂತ ಅವಶ್ಯಕತೆಗಳಲ್ಲಿ ಒಂದೆAದು ನಮ್ಮ ಜನಪದರು ಭಾವಿಸಬೇಕು. ಆಗ ನಮ್ಮ ಮಕ್ಕಳಿಗೆ ನಾವು ನೀತಿ ಪಾಠ ಹೇಳಬೇಕಾಗಿಲ್ಲ, ನಮ್ಮ ಬದುಕಿನ ರೀತಿಯೇ ಅವರನ್ನು ಬೆಳೆಸುತ್ತದೆ, ಉಳಿಸುತ್ತದೆ. ಅದಕ್ಕಾಗಿ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಅಸ್ತಿತ್ವಕ್ಕೆ ತರುವ ಯೋಜನೆ ನಮ್ಮದಾಗಿದೆ ಎಂದು ವಿವರಿಸಿದರು. 

 ಕವಿ ಕೃತಿ ಪರಿಚಯದಲ್ಲಿ ಡಾ. ಗುರುದೇವಿ ಹುಲೆಪ್ಪನವರಮಠ ಅವರ ಕುರಿತು ಮಾತನಾಡಿದ ಸಾಹಿತಿ ಸುನಂದಾ ಎಮ್ಮಿ ಅವರು ಶರಣರನ್ನು ಖುದ್ದು ನೋಡಿರದ ಯಾರಿಗಾದರೂ ಗುರುದೇವಿ ಹುಲ್ಲಪ್ಪನವರ ಮಠ ಅವರ ಕುಟುಂಬದ ಬದುಕಿನ ರೀತಿ ನೋಡಿದರೆ ಶರಣರು ಹೀಗಿದ್ದರೂ ಎಂಬ ದರ್ಶನವಾಗುತ್ತದೆ. ಗೌರವ ಕೊಟ್ಟವರಿಗೆ ಗೌರವ ಬರುವಂತೆ ಬದುಕಿದವರು. ಗುರುದೇವಿ ಅವರ ಸಾಹಿತ್ಯ ತಿಳಿ ನೀರಿನ ಸಿಹಿ ಸರೋವರದಂತೆ. ಇಂಗ್ಲಿಷ್ ಅಧ್ಯಾಪಕರಾದ ಅವರ ಕನ್ನಡ ಸಾಹಿತ್ಯ ಸೇವೆ ಅನುಪಮವಾದದು. ಅವರ ಮನೆಯಲ್ಲಿ ಪುಸ್ತಕ ಪ್ರಾಧಿಕಾರವು ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಅವರಿಗೆ ಪ್ರಾಧಿಕಾರ ತೋರಿದ ಗೌರವದ ಪ್ರತೀಕವಾಗಿದೆ ಎಂದು ಹೇಳಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ್ ಬರಗೂರು ಆಶಯ ನುಡಿಗಳನ್ನಾಡಿದರು. ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಕವಿತಾ ಕುಸುಗಲ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. 

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಯಲ್ಲಪ್ಪ ಹಿಮ್ಮಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು . ಸಮಾರಂಭದಲ್ಲಿ ಶಾಂತಾದೇವಿ ಹುಲೆಪ್ಪನವರಮಠ, ಅಕ್ಕಮಹಾದೇವಿ ತೆಗ್ಗಿ, ಶಿವಯೋಗಿ ಕುಸುಗಲ್, ಗಂಗಾದೇವಿ ಕುಸುಗಲ್, ಪ್ರಭಾ ಪಾಟೀಲ, ರಿತೇಶ ಹೆಜ್ಜೆ ಮತ್ತಿತರರು ಭಾಗವಹಿಸಿದ್ದರು. 

ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಡಾ. ಸಂತೋಷ ನಾಯಿಕ ಸ್ವಾಗತಿಸಿದರು, ಶಿವಪ್ರಸಾದ ಹುಲೆಪ್ಪನವರಮಠ ವಂದಿಸಿದರು, ವಿನಾಯಕ ನಂದಿ ನಿರೂಪಿಸಿದರು.