ನನ್ನಲ್ಲಿ ಅಪಾರವಾದ ಶಕ್ತಿ ಇದೆ, ನಾನು ಏನು ಬೇಕಾದರೂ ಸಾಧಿಸಬಲ್ಲೆ ಎನ್ನುವುದೇ ಯಶಸ್ಸಿನ ಮಂತ್ರ.
The mantra for success is the belief that I possess immense power and can achieve anything.
ವಿಜಯಪೂರ ೨೪ : ನನ್ನಲ್ಲಿ ಅನವರತ ಶಕ್ತಿ ಇದೆ. ನಾನು ಏನನ್ನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಉಕ್ತಿಯು ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಂತ್ರವಾಗಿರಬೇಕು. ಅದನ್ನು ಸದಾ ಜಪಿಸುತ್ತಲೇ ಇರಬೇಕು. ಆಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ದ್ವಿಗುಣಗೊಳ್ಳುವುದರ ಜೊತೆಗೆ ಸಾಧನೆಯ ಶಿಖರವೇರುವುದಕ್ಕೆ ಸಾಧ್ಯ ಎಂದು ಬಳ್ಳಾರಿಯ ರಾಮಕೃಷ್ಣ ಮಿಶನ್ ಕಾರ್ಯದರ್ಶಿ ಪ. ಪೂ ಮಂಗಳಾನಾಥನAದಜೀ ಮಹಾರಾಜ್ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ‘ಆತ್ಮವಿಶ್ವಾಸ ವೃದ್ಧಿ ಹಾಗೂ ಮನೋನಿರ್ವಹಣೆ’ ಎನ್ನುವ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು; ಬದುಕಿನಲ್ಲಿ ಬರೀ ಗೆಲವು ಕಂಡವನು ಎಂದೂ ಯಶಸ್ವಿಯಾಗಲಾರ. ಸೋತು ಗೆದ್ದವರು ಮಾತ್ರ ಯಶಸ್ವಿಯಾಗುತ್ತಾರೆ. ಆ ಸಾಧನೆಯ ಮಾರ್ಗದಲ್ಲಿ ಸಾಗುವಾಗ ನನ್ನಿಂದ ಎಲ್ಲವೂ ಸಾಧ್ಯ. ನಾನು ಅಂದುಕೊAಡದ್ದನ್ನು ಮಾಡಿ ತೋರಿಸುತ್ತೇನೆ ಎನ್ನುವ ಛಲ ಮೂಡಿಸಿಕೊಳ್ಳಬೇಕು. ಸೋಲುತ್ತೇನೆಂಬ ಭಯವೂ ಇರಬಾರದು, ಸೋತೆನೆಂಬ ಹತಾಸೆಯು ಇರಬಾರದು. ಸೋತರು ಸರಿ ಮತ್ತೆ ಮತ್ತೆ ಯತ್ನಿಸಿ ಗೆಲ್ಲುತ್ತೇನೆಂಭ ಮನೋದಾರ್ಢ್ಯತೆ ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಮನೋದಾರ್ಢ್ಯತೆ ಎನ್ನುವ ಧಿವ್ಯ ಔಷಧ ನಮ್ಮಲ್ಲಿ ಇದ್ದರೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾಲ್ಕು ಬಾರೀ ಫೇಲ್ ಆದವನು ಸಹ ಮುಂದೆ ಐಎಎಸ್ ಪಾಸು ಮಾಡಿದಂತ ಉದಾಹರಣೆಗಳಿವೆ. ಆ ಕಾರಣದಿಂದಾಗಿ ಸದೃಢ ಶರೀರದ ಜೊತೆಗೆ ಸದೃಢ ಮನಸ್ಸು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು. ನಾವು ಒಳ್ಳೆಯದನ್ನು ಮಾಡಲು ಹೊರಟಾಗ ನಮಗೆ ತೊಂದರೆ ಕೊಡುವುದಕ್ಕೆಂದು ಸಾವಿರಾರು ಜನಗಳು ಬರುತ್ತಾರೆ. ನಕಾರಾತ್ಮಕ ಮಾತುಗಳಿಂದ ನಮ್ಮನು ಹಿಂದೆ ಎಳೆಯಲು ಯತ್ನಿಸುತ್ತಾರೆ. ಯಾವುದಕ್ಕೂ ಕಿವಿಗೊಡಬಾರದು. ಇಡೀ ಜಗತ್ತು ಏನೇ ಅಂದರೂ ಸಹ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಆಗ ಮಾತ್ರ ಸೋಲಿನ ಕಹಿಯನ್ನು ಗೆಲುವಿನ ಸಿಹಿಯನ್ನಾಗಿ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಓದುವುದಕ್ಕೆ ಆಗುವುದಿಲ್ಲ, ಏಕಾಗ್ರತೆ ದೊರೆಯುತ್ತಿಲ್ಲ. ಓದಿದರೂ ನೆನಪಲ್ಲಿ ಉಳಿಯುತ್ತಿಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಸಾಗುತ್ತಾರೆ. ಇಂಥಹ ನಕಾರಾತ್ಮಕ ಮನಸ್ಸಿನಿಂದ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ. ಸ್ವಾಮಿ ವಿವೇಕಾನಂದರು ಹೇಳುವಂತೆ ನಕಾರಾತ್ಮ ವಿಚಾರಗಳನ್ನು ಸಕಾರಾತ್ಮಕ ಚಿಂತನೆಗಳ ಮೂಲಕ ಹೊಡೆದೋಡಿಸಬೇಕು.
ವಿಚಾರಗಳು ಶುದ್ಧವಾಗಿದ್ದರೆ ಮನಸ್ಸು ಸಹ ನಿರ್ಮಲವಾಗುತ್ತದೆ. ಮನಸ್ಸು ನಿರ್ಮಲವಾದರೆ ಮನವೇ ಮಂದಿರವಾಗುತ್ತದೆ. ಆ ನಿಟ್ಟಿನಲ್ಲಿ ಬದಲಾವಣೆಯ ಪರ್ವಕ್ಕೆ ಮನಸ್ಸು ತೆರೆದುಕೊಳ್ಳಬೇಕು ಎಂದು ಹೇಳಿದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್ ಬಸವರಾಜ್ ಕೌಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ಮಂಡಳಿ ಹಾಜರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 