ಗ್ರಂಥಗಳು ಮನುಷ್ಯನ ಜ್ಞಾನಾರ್ಜನೆಗೆ ತುಂಬಾ ಸಹಕಾರಿ: ಸುಭಾಷ್ ಸಾವುಕಾರ
ರಾಣೆಬೆನ್ನೂರು 25: ಪುಸ್ತಕದ ಅಕ್ಷರಗಳು ಮಸ್ತಕಕ್ಕೆ ಬಿದ್ದರೆ ಅದರಿಂದ ಯಾವುದೇ ಹಾನಿ ಇಲ್ಲ. ವಿಫಲವಾದ ಜ್ಞಾನ ಸಂಪಾದನೆ ಹೆಚ್ಚಾಗಿ, ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ ಎಂದು ಆರ್. ಟಿ. ಎಸ್. ಕಾಲೇಜು ಅಧ್ಯಕ್ಷ ಶುಭಾಸ ಸಾವುಕಾರ ಹೇಳಿದರು.
ಅವರು, ಕಾಲೇಜಿನ ವ್ಹಿ.ಕೆ. ಸಾವುಕಾರ ಸಭಾಭವನದಲ್ಲಿ, ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ವಿಜ್ಞಾನ ಕೇಂದ್ರ, ಕನ್ನಡ ವಿಭಾಗ ಸಂಯುಕ್ತವಾಗಿ ಆಯೋಜಿಸಿದ್ದ " ವಿಶ್ವ ಪುಸ್ತಕ ದಿನಾಚರಣೆ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜ್ಞಾನ, ವಿಜ್ಞಾನ, ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರೂ ಸಹ, ನೈಜತೆ ಕಣ್ಣಿಗೆ ಕಟ್ಟುವಂತೆ ಮನಸಿಗೆ ನಾಟುವಂತೆ ಕಾಣುವ ಅಕ್ಷರಗಳು ಅತೀವ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಕಾಲೇಜು ಪ್ರಾಚಾರ್ಯ ಸಿ.ಎ. ಹರಿಹರ ಅವರು ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಜ್ಞಾನಾರ್ಜನೆ ಬೆಳೆಸಿಕೊಳ್ಳುವಲ್ಲಿ ಪುಸ್ತಕಗಳ ಮಹತ್ವ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಐ. ಕ್ಯೂ ಎ.ಸಿ, ಸಂಚಾಲಕ ಡಾ, ಮಧುಕುಮಾರ ಆರ್. ಗ್ರಂಥಪಾಲಕ ಡಾ, ಪಿ ಬಿ ಕೊಪ್ಪದ, ಸಹಾಯಕಿ ಅಂಜನಾ ಪವಾರ, ಕನ್ನಡ ವಿಭಾಗದ ಮುಖ್ಯಸ್ಥ ಡಾ, ರಾಮರೆಡ್ಡಿ ಎಸ್ ರೆಡ್ಡೇರ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ, ಸರಸ್ವತಿ ಬಮ್ಮನಾಳ, ಬಸವರಾಜ ಕಾಟೇನಹಳ್ಳಿ, ಜಂಬಪ್ಪ ನಾಯಕ, ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.