ಪುಸ್ತಕ ಮನೆ : ಹರಿಹರಪ್ರಿಯ

ಎಷ್ಟೋ ಮಹತ್ವದ ಪುಸ್ತಕಗಳು ಸರ್ಕಾರಿ ಗ್ರಂಥಾಲಯಗಳಲ್ಲಿ ಸಿಗುವುದಿಲ್ಲ. ಯಾರಿಗಾದರೂ ಎಲ್ಲೂ ಕಂಡಿರದ ಪುಸ್ತಕಗಳನ್ನು ನೋಡಲೇಬೇಕು, ಓದಲೇಬೇಕು ಎಂದೆನಿಸಿದಾಗ ಥಟ್ಟನೆ ನೆನಪಿಗೆ ಬರುವುದು ಪುಸ್ತಕಮನೆ. ಕನ್ನಡ ಪುಸ್ತಕಗಳ, ಕನ್ನಡ ಪತ್ರಿಕೆಗಳ ಸಮಗ್ರತೆಯ, ವ್ಯವಸ್ಥಿತ ಜೋಡನೆಯ ವಿಶ್ವರೂಪ ದರ್ಶನ ಪಡೆಯಬೇಕಾದರೆ ಬೆಂಗಳೂರಿನ ಹರಿಹರಿ​‍್ರಯ ಅವರ ಪುಸ್ತಕಮನೆಗೆ ಬರಬೇಕು. ಅವರು ಕನ್ನಡ-ಸಾಹಿತ್ಯ-ಸಂಸ್ಕೃತಿ ಚಿಂತಕ, ಬರಹಗಾರ, ಭಾಷಣಕಾರ ಎಲ್ಲದ್ದಕ್ಕೂ ಮಿಗಿಲಾಗಿ ಕರ್ನಾಟಕದ ಅತ್ಯುತ್ತಮ ಪುಸ್ತಕ ಸಂಗ್ರಹಕಾರರು.  

ಆಂದ್ರ ಮೂಲದ ಸಾತವಲಿ ವೆಂಕಟವಿಶ್ವನಾಥ ಭಟ್ ಅವರು ಹರಿಪ್ರಿಯ ಎಂದೇ ಪರಿಚಿತರು. ಅವರು 1952ರ ಜನೇವರಿ 20ರಂದು ಮೈಸೂರಿನಲ್ಲಿ ಜನಿಸಿದರು. ಅವರು ಬೆಳೆದದ್ದು ಮಂಡ್ಯದಲ್ಲಿ. ತಂದೆಯವರು ಆಂಜನೇಯ ದೇವಸ್ಥಾನದ ಅರ್ಚಕರು. ಕಡುಬಡತನದಲ್ಲಿ ಬೆಳೆದ ಅವರು ಮೈಸೂರು, ಮಂಡ್ಯ, ಕೃಷ್ಣರಾಜಪೇಟೆ, ನಾಗಮಂಗಲ, ಹೊಳೆನರಸೀಪುರ ಹೀಗೆ ತಿರುಗುತ್ತ ವಾರಾನ್ನ ಮಾಡುತ್ತ ಹರಿಹರಿ​‍್ರಯರು ಹನ್ನೊಂದನೇಯ ತರಗತಿಯವರೆಗೆ ಶಿಕ್ಷಣವನ್ನು ಪೂರೈಸಿದರು. ನಂತರ ‘ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದರು.  
ಹರಿಹರಿ​‍್ರಯರು ಸೊಸೈಟಿ ಗುಮಾಸ್ತ, ಮುದ್ರಣಾಲಯದಲ್ಲಿ ಪ್ರೂಫ್‌ರೀಡರ, ವಾಚನಾಲಯದಲ್ಲಿ ಸಹಾಯಕ, ಪತ್ರಿಕಾ ವರದಿಗಾರ, ಚಲನಚಿತ್ರ ನಿರ್ಮಾಣದಲ್ಲಿ ಸಹಾಯಕ ಹೀಗೆ ಹೊಟ್ಟೆಪಾಡಿಗಾಗಿ ಹತ್ತು ಹಲವು ಕೆಲಸಗಳನ್ನು ಮಾಡಿದರು. ಅವರು ಕೆನ್ ಕಲಾ ಶಾಲೆ, ಕಲಾಮಮಂದಿರಗಳಲ್ಲಿ ಸಾಹಿತ್ಯ, ಕಲಾಚರಿತ್ರೆ ಕುರಿತು ಗೌರವ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1976ರಲ್ಲಿ ಅವರು ‘ಕುವೆಂಪು ದರ್ಶನ’ ಎಂಬ ದ್ವೈಮಾಸಿಕ ಪತ್ರಿಕೆಯ  ಸಂಪಾದಕರಾಗಿದ್ದರು. ನಂತರ ಕಾಗಿನೆಲೆಯ ಕನಕ ಪ್ರತಿಷ್ಠಾನದ ‘ಕನಕ ಸ್ಪೂರ್ತಿ’ ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ರಂಗಭೂಮಿ ಕುರಿತಾದ ‘ಈ ಮಾಸ ನಾಟಕ’ ಪತ್ರಿಕೆಗೂ ಗೌರವ ಸಂಪಾದಕರಾಗಿದ್ದರು. 
ಹದಿನಾರನೇ ವಯಸ್ಸಿನಲ್ಲಿಯೇ ಸಾಹಿತ್ಯ ಕೃಷಿ ಆರಂಭಿಸಿದ ಹರಿಹರಿ​‍್ರಯರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರೆದಿದ್ದಾರೆ. ಕಾವ್ಯ, ಕಾದಂಬರಿ, ಕತೆ, ನಾಟಕ, ಸಂಶೋಧನೆ, ವ್ಯಕ್ತಿಚಿತ್ರ, ವಿಮರ್ಶೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಅನುವಾದ, ಸಂಪಾದನೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಹರಿಹರಿ​‍್ರಯರು ಕೃತಿಗಳನ್ನು ರಚಿಸಿದ್ದಾರೆ. ಹೇಮಾವತಿ ಕವನಸಂಕಲನ, ಬದುಕಗೊಡದ ಜನ ಕಾದಂಬರಿ, ಇವರು ಕುವೆಂಪು, ಕುವೆಂಪು ಪತ್ರಗಳು, ಡಿ.ಲಿಂಗಯ್ಯನವರ ಸಾಹಿತ್ಯ ಪರಿಚಯ, ಕುವೆಂಪು ಒಲವು ನಿಲುವು, ದೇಸಿಯರು, ಅ.ನ.ಸುಬ್ಬರಾವ್, ಚದುರಂಗರ ಮನಸ್ಸು ಮತ್ತು ಮೌಲ್ಯಗಳು, ಸಮಗ್ರ ವ್ಯಕ್ತಿ ಚಿತ್ರಗಳು ಮುಂತಾದ ವ್ಯಕ್ತಿ, ಸಾಹಿತ್ಯ ಪರಿಚಯ ಕೃತಿಗಳು, ಸಾಹಿತ್ಯ ರಂಗದಲ್ಲಿ ರಾಜಕೀಯ, ಸಾಂಸ್ಕೃತಿಕ ದಾಖಲೆಗಳು, ಸಾಹಿತ್ಯವು ಜೀವನವು, ಕಾಳಜಿ, ಬಂಡಾಯ ಮನೋಧರ್ಮ, ಪರ್ಯಾಯ ಸಂಸ್ಕೃತಿ, ಸಮಗ್ರ ವಿಚಾರ ವಿಮರ್ಶೆ, ಕನ್ನಡ ತೆಲುಗು ಸಾಹಿತ್ಯ ವಿನಿಮಯ ವಿಮರ್ಶೆ ಕೃತಿಗಳು, ತಿಳಿಯ ಹೇಳುವ ಕೃಷ್ಣ ಕತೆಯನು ಮಕ್ಕಳ ಸಾಹಿತ್ಯ, ಜಾಬಾಲಿ, ವಿಶ್ವನಾಥ್ ಸಾಹಿತ್ಯೋಪನ್ಯಾಸಗಳು, ರಸರೇಖೆ, ತೇಜೋರೇಖೆಗಳು, ಅಂತರಾಷ್ಟ್ರೀಯ ವ್ಯಕ್ತಿತ್ವಗಳು, ಪ್ರಾಚೀನ ಭಾರತದ ಕವಿತೆಗಳು, ಪರಿಶೋಧನೆ ಅನುವಾದ ಕೃತಿಗಳು, ಸಮಕಾಲೀನ ಇತಿಹಾಸ ಅಂಕಣ ಬರಹ, ಕಳಕಳಿ, ಗಮಕ ಶಾರದೆ, ಪ್ರಸ್ತುತ, ವರ್ಧಮಾನ ಸಂಪಾದನೆ ಹೀಗೆ 40ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ​‍್ಿಸಿದ್ದಾರೆ.  
‘ಪುಸ್ತಕ ಮನೆ’ ಎನ್ನುವುದು ಅವರ ಅಪರೂಪದ ಪುಸ್ತಕ ಸಂಗ್ರಹಾಲಯ. ಯಾರಿಗಾದರೂ, ಎಲ್ಲೂ ಕಂಡಿರದ ಪುಸ್ತಕವನ್ನು ನೋಡಲೇಬೇಕು, ಓದಲೇಬೇಕು, ಅಧ್ಯಯನಕ್ಕೆ ಬೇಕೆಬೇಕು ಎಂದೆನಿಸಿದಾಗ ಥಟ್ಟನೆ ನೆನಪಿಗೆ ಬರುವುದು ಪುಸ್ತಕ ಮನೆ. ಒಂದು ಲಕ್ಷಕ್ಕೂ ಮೀರಿ ಕನ್ನಡ, ತೆಲುಗು ಹಾಗೂ ಇಂಗ್ಲೀಷ್ ಪುಸ್ತಕಗಳ ಮತ್ತು ಪತ್ರಿಕೆಗಳ ಸಂಗ್ರಹ ಇಲ್ಲಿದೆ. ಕನ್ನಡ ಪುಸ್ತಕಗಳ-ಕನ್ನಡ ಪತ್ರಿಕೆಗಳ ಸಮಗ್ರತೆಯ ವ್ಯವಸ್ಥಿತ ಜೋಡಣೆ ವಿಶ್ವರೂಪ ದರ್ಶನ ಪಡೆಯಬೇಕಾದರೆ ಹರಿಹರಿ​‍್ರಯ ಅವರ ಪುಸ್ತಕ ಮನೆ ನೋಡಬೇಕು. ಅಪರೂಪದ ಸಾಹಿತ್ಯ ಮತ್ತು ವ್ಯಕ್ತಿಗಳ ಬಗ್ಗೆ ಅಧಿಕೃತ ಮಾಹಿತಿ ನೀಡಬಲ್ಲ ಮಾಹಿತಿಕೋಶ ಎಂದೇ ಅವರು ಖ್ಯಾತರು. ಅಲ್ಲದೇ ಸತತ ಐದು ವರ್ಷಗಳ ಕಾಲ ಪುಸ್ತಕ ದರ್ಶನ ನಡೆಸಿದ ದಾಖಲೆ ಅವರದು. ಅವರಲ್ಲಿ ಮುದ್ರಣದ ಪ್ರಾರಂಭದಿಂದ ಹಿಡಿದು ಇಂದಿನವರೆಗೂ ಪುಸ್ತಕ ಸಂಗ್ರಹವಿದೆ. ಒಂದು ಅಧ್ಯಯನ ಪ್ರಕಾರ, ಕಲ್ಕತ್ತಾದ ಅಶುತೋಷ ಮುಖರ್ಜಿ, ಆಂಧ್ರದ ನಾರ್ಲಾ, ಮಹಾರಾಷ್ಟ್ರದ ಡಾ.ಬಿ ಆರ್ ಅಂಬೇಡ್ಕರ್ ಅತಿ ಮಹತ್ವದ ಪುಸ್ತಕ ಸಂಗ್ರಹಕಾರರು.  
ಕುವೆಂಪು ಅವರ ಬದುಕು ಬರಹ ಹರಿಹರಿ​‍್ರಯರ ಸಾಹಿತ್ಯದ ಉಳುಮೆಗೆ ಬಹುಮುಖ್ಯ ಕಾರಣವಾಗಿದೆ. ಫ್ರೆಂಚ್ ಲೇಖಕರಾದ ವಿಕ್ಟರ್ ಹ್ಯೂಗೋ ಅವರ ಕೃತಿ ಲೇಸ್ ಮೀಸರೆಬಲ್ಸ್‌’ ಅವರ ಮೇಲೆ ಬಹಳ ಪ್ರಭಾವ ಬೀರಿದೆ. ಇಬ್ಬರು ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್ ಶಿವರುದ್ರ​‍್ಪ ಅವರ ಗರಡಿಯಲ್ಲಿ ಮೂರು ದಶಕಗಳಿಗೂ ಮೀರಿ ಬೆಳೆದವರು. ವಿಶಿಷ್ಟ ಬರಹಗಾರ ಪಿ.ಲಂಕೇಶರ ನಿಕಟವರ್ತಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದ ‘ಪಲ್ಲವಿ’ ಚಲನಚಿತ್ರಕ್ಕೂ, ಪಾಂಚಾಲಿ ವಿಶೇಷಾಂಕಕ್ಕೂ ದುಡಿದವರು. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಜೆ.ಪಿ ಚಳುವಳಿ, ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ವಿಕಾಸ ವೇದಿಕೆ, ನಾನ್ ಅಕಾಡೆಮಿಕ್ ಬರಹಗಾರರ ಪ್ರಜಾಸಾಹಿತಿ ಬಳಗ ಹಾಗೂ ಮಾನವ ಸಮಾಜ ನಿರ್ಮಾಣದಂಥ ಸಮಾಜಮುಖಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಇಷ್ಟೆಲ್ಲ ಚಟುವಟಿಕೆಗಳ ನಡುವೆ ತಾವಿರುವ ಪರಿಸರದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಗೂಡಿಸಿ ಅವುಗಳಿಗೆ ನಿರಂತರ ಆಡಳಿತಾತ್ಮ ಪರಿಹಾರಗಳನ್ನು ಹುಡುಕಿಕೊಡುವಲ್ಲಿ ಹರಿಹರಿ​‍್ರಯರು ಸದಾ ಮುಂದು.   
ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಅವರ ‘ಪುಸ್ತಕದ ಮನೆ’ ಯನ್ನು ಸಂಸ್ಥೆ ಎಂದು ಗುರುತಿಸಿ ಗೌರವಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗಳಗನಾಥ ಪ್ರಶಶ್ತಿ, ವರ್ಧಮಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಆಂಧ್ರ​‍್ರದೇಶದ ವಿ.ಆರ್‌.ನಾರಾ​‍್ಲ ಪ್ರಶಸ್ತಿ, ದೇಜಗಾ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಹರಿಹರಿ​‍್ರಯರು ಭಾಜನರಾಗಿದ್ದಾರೆ. ಅಲ್ಲದೇ ಇಂಡಿಯನ್ ವರ್ಚೂವಲ್ ಪೀಸ್ ಆ್ಯಂಡ್ ಎಜುಕೇಶನ್ ಗೌರವ ಡಾಕ್ಟರೇಟ್ ಗೌರವವು ಅವರಿಗೆ ಲಭಿಸಿದೆ.  
ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಯೊಬ್ಬರ ಅಸಾಮಾನ್ಯವಾದ ಪುಸ್ತಕ ಸಂಗ್ರಹಗಳ ಸಾಧನೆ ನಿಬ್ಬೆರಗಾಗಿಸುತ್ತದೆ. ಕತೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ಜೀವನದರ್ಶನ, ನಿಘಂಟು-ಪ್ರವಾಸಿ ಪುಸ್ತಕ, ಮಹಾನ್ ವ್ಯಕ್ತಿಗಳ ಆತ್ಮಚರಿತ್ರೆ, ಜ್ಞಾನಪೀಠ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಹೊತ್ತಿಗೆಗಳು ಇಲ್ಲಿ ಲಭ್ಯ. ಅವರ ಸಾಧನೆಗೆ ಸರ್ಕಾರ ಮತ್ತು ಸಂಘಸಂಸ್ಥೆಗಳು ಸ್ಪಂದಿಸಿ ನೆರವಾಗಬೇಕಿದೆ. ಪುಸ್ತಕ ಮನೆಯನ್ನು ನೋಡಿಲ್ಲವೆಂದರೆ ಒಮ್ಮೆ ಭೇಟಿಕೊಟ್ಟು ನಿಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಿ. ಸಂಪರ್ಕ:- 9242221506  
- * * * -