ಲೋಕದರ್ಶನವರದಿ
ಶಿಗ್ಗಾವಿ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಹಾನಿಯೂ ಸಹಿತ ಹೆಚ್ಚಾಗಿಯೇ ಆಗಿದೆ ಆದರೆ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಭಾಗದಲ್ಲಿ ಆದ ಹಾನಿಯ ಪ್ರಚಾರವು ನಮ್ಮ ಭಾಗದಲ್ಲಿ ಆಗಲಿಲ್ಲ, ಹಾನಿಯ ಪ್ರಮಾಣ ಮತ್ತು ಪರಿಣಾಮವನ್ನು ಅಧಿಕಾರಿಗಳು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳುವದಿಲ್ಲವೋ ಅಲ್ಲಿಯ ವರೆಗೆ ಜನತೆಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಿಲ್ಲ, ನಾನು ತಾಲೂಕಿನಾಧ್ಯಂತ ಹಾನಿಯ ವೀಕ್ಷಣೆಯನ್ನು ಮಾಡಿದ್ದೆನೆ, ಅಧಿಕಾರಿಗಳು ಎಲ್ಲಿ ಕಾನೂನಾತ್ಮಕ ಕಾರ್ಯಗಳನ್ನು ಮಾಡಬೇಕೊ ಅಲ್ಲಿ ಮಾಡುವದಿಲ್ಲ ಅಲ್ಲಿ ಕಣ್ಣು ಮುಚ್ಚಿಕೊಳ್ಳುತ್ತಿರಿ ಎಲ್ಲಿ ಮಾನವೀತೆಯ ದೃಷ್ಟಿಯಿಂದ ಉಧಾರ ಮನೋಭಾವದಿಂದ ಕೆಲಸ ಮಾಡಬೇಕೊ ಅಲ್ಲಿ ಕಾನೂನಿನ ಅಳತೆ ಕೊಲನ್ನು ಇಡುತ್ತಿರಿ ಇದು ಒಳ್ಳೆಯ ಸೇವೆಯಲ್ಲ, ಸೇವಾ ಮನೋಭಾವ ಇಲ್ಲವಾದರೆ ಹೇಳಿಬಿಡಿ ಎಂದು ಬಹಳ ನೋವಿನಿಂದ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಶಿಗ್ಗಾವಿ ಸವಣೂರ ತಾಲೂಕಿನ ವಿಪತ್ತು ನಿರ್ವಹಣಾ ಕಾರ್ಯಪಡೆಯ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವಿಕೋಪದ ಪರಿಣಾಮ ಮತ್ತು ಪ್ರಮಾಣ ಅರಿಯದವರಿಗೆ ನ್ಯಾಯ ಒದಗಿಸಲು ಸಾದ್ಯವಾಗುವದಿಲ್ಲ ಅವರು ಮೊದಲು ಮಾನಸಿಕವಾಗಿ ಅರ್ಥ ಮಾಡಿಕೊಳ್ಳಬೇಕು ತೊಂದರೆಗಳಾಗುವದು ಬಡವರಿಗೆ ಮಾತ್ರ ಅದನ್ನು ಅಧಿಕಾರಿ ವರ್ಗದವರು ಅರ್ಥ ಮಾಡಿಕೊಂಡು ನೆರವಾಗಬೇಕು,
ಕೃಷಿ ಇಲಾಖೆಃ ಶೇ 99 ರಷ್ಟು ಜಮಿನುಗಳು ನೀರಲ್ಲಿವೆ ಕೆಲ ಕಡೆಗಳಲ್ಲಿ ಬೆಳೆಗಳಷ್ಟೆ ಅಲ್ಲ ಜಮೀನುಗಳೂ ಸಹಿತ ನಾಶವಾಗಿವೆ ಇದರ ಸಮೀಕ್ಷೆಯನ್ನು ಡ್ರೋನ್ ಕ್ಯಾಮರಾದಿಂದಲೂ ಸಹಿತ ಸಮೀಕ್ಷೆ ಮಾಡಲು ಸೂಚಿಸಿದ ಅವರು ಈಗಿರುವ ಸಿಬ್ಬಂದಿಗಳು ಸಾಲದೆ ಹೊದರೆ ಪಯರ್ಾಯ ವ್ಯವಸ್ಥೆಯ ಕ್ರಮಕ್ಕೆ ಮುಂದಾಗಿ ಎಂದರು.
ಹೆಸ್ಕಾಂಃ ಶಿಗ್ಗಾವಿ ಮತ್ತು ಸವಣೂರ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ತುತರ್ಾಗಿ ಕ್ರಮಕ್ಕೆ ಮುಂದಾಗಿ ಎಂದು ತಾಕೀತು ಮಾಡಿದ ಅವರು ಸವಣೂರ ತಾಲೂಕಿನ 8 ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಾಗಿದೆ, ಈಗಾಗಲೇ 4 ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಸಮಸ್ಯೆ ಇರುವ ಗ್ರಾಮಕ್ಕೆ ತೆರಳಿ ಸರಿಪಡಿಸಲು ಸೂಚಿಸಿದರು.
ಕುಡಿಯುವ ನೀರುಃ ತಾಲೂಕಿನ ಶಿಗ್ಗಾವಿ ಪಟ್ಟಣ ಸೇರಿದಂತೆ ಹಿರೇಮಲ್ಲೂರ, ಕೆಂಗಾಪೂರ, ತಡಸ, ಬಾಡ, ಮಡ್ಲಿ, ಸವಣೂರ ಮತ್ತು ಮನ್ನಂಗಿ ಗ್ರಾಮಗಳಲ್ಲಿ ತುತರ್ಾಗಿ ನೀರಿನ ಸಮಸ್ಯೆಯನ್ನು ಸರಿಪಡಿಸಲು ಸೂಚಿಸಿದರು.
ಶಿಗ್ಗಾವಿ ಪಟ್ಟಣದಲ್ಲಿಯೇ ಒಟ್ಟು 113 ಮನೆಗಳು ಬಿದ್ದಿದ್ದು ಎಲ್ಲ ಮನೆಗಳ ಮರಳಿ ಕಟ್ಟಿಕೊಳ್ಳಲು ನೆರವಾಗಬೇಕು ಜೊತೆಗೆ ತಾಲೂಕಿನಾದ್ಯಂತ ಹಾಳಾದ ಕೆರೆಗಳ ಪುನರ್ ಅಭಿವೃದ್ದಿಗೆ ಯೋಜನಾ ವರದಿ ಮಾಡಿ ಕಳಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು, ಎಲ್ಲಲ್ಲಿ ನಷ್ಟವಾಗಿದೆಯೋ ಅಲ್ಲಲ್ಲಿ ಹಾಳಾದ ರಸ್ತೆಗಳನ್ನು ಸರಿಪಡಿಸಿ ಜೊತೆಗೆ ತಡಸ-ಕಲಘಟಗಿ, ಬಂಕಾಪೂರ-ಸವಣೂರ, ಸವಣೂರ-ಶೆರೆವಾಡ, ಹಿರೆಮಣಕಟ್ಟಿ-ಕಬನೂರ, ಮಡ್ಲಿ-ಶ್ಯಾಡಂಬಿ ಜೊತೆಗೆ ನವಲಗುಂದ-ಬನವಾಸಿ, ಕಾರವಾರ-ಹಾನಗಲ್ ರಸ್ತೆಗಳನ್ನು ಮುಖ್ಯವಾಗಿ ಸರಿಪಡಿಸಲು ಸೂಚಿಸಿದರು, ಅದರಲ್ಲಿ ನಿಡಗುಂದಿ-ಹುಣಸಿಕಟ್ಟಿ ರಸ್ತೆಯು ಸಂಪೂರ್ಣ ಹಾನಿಯಾಗಿದ್ದು ಶೀಘ್ರವೇ ಸರಿಪಡಿಸಲು ಸೂಚಿಸಿದರು.
ತಾಲೂಕಿನಲ್ಲಿ ಒಟ್ಟು 79 ಶಾಲೆಗಳು ಬಿದ್ದಿವೆ 144 ಶಾಲೆಗಳು ಸೊರುತ್ತಿರುವ ಎಂದು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇನ್ನೊಮ್ಮೆ ಸರಿಯಾಗಿ ಮಾಹಿತಿ ಪಡೆದು ನೂತನ ಕಟ್ಟಡಗಳ ಯೋಜನಾ ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಸೂಚಿಸಿದರು.
ತಾಲೂಕಿನಾದ್ಯಂತ ಡೆಂಗ್ಯೂ ಜ್ವರ ಆವರಿಸಿದ್ದು ಬೆಳಗಲಿಯಲ್ಲಿ ಒಂದೆ ಕುಟುಂಬದ 12 ಜನರಿಗೆ ಜ್ವರ ಕಾಣಿಸಿಕೊಂಡಿದ್ದು ಕ್ರಮಕ್ಕೆ ಮುಂದಾಗಲು ಸೂಚಿಸಿದರು ತೆರೆದ ಗಂಜಿಕೇಂದ್ರದಲ್ಲಿ ವೈದ್ಯಕೀಯ ಸೇವೆ ಸೇರಿದಂತೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳು ಕೆಲಸ ಮಾಡಬೇಕು ಅದೃಷ್ಟ ವಶಾತ್ ತಾಲೂಕಿನಲ್ಲಿ ಯಾವುದೆ ಪ್ರಾಣ ಹಾನಿ ಸಂಬವಿಸಿಲ್ಲ, ಸಮಯೊಚಿತ ಮತ್ತು ನ್ಯಾಯಸಮ್ಮತ ಪ್ರಾಮಾಣಿಕ ಪರಿಹಾರ ಕೊಡಿಸಲು ಅಧಿಕಾರಿಗಳು ಮುಂದಾಗಬೇಕು ಒಂದು ವಾರದ ನಂತರ ಮತ್ತೆ ಎಲ್ಲರೂ ಕೂಡಿ ಚಚರ್ಿಸಿ ಮುಂದಿನ ಕ್ರಮಕ್ಕೆ ಮುಂದಾಗಿ ಜನರ ನೋವಿಗೆ ಸ್ಪಂದಿಸಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಜಪೇಯಿ, ಜಿಪಂ ಸಿಇಓ ಕೆ ಲೀಲಾವತಿ, ಸವಣೂರ ಉಪವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್, ಶಿಗ್ಗಾವಿ ತಹಶೀಲ್ದಾರ ಚಂದ್ರಶೇಖರ ಗಾಳಿ, ಸವಣೂರ ತಹಶೀಲ್ದಾರ ವಿ ಡಿ ಸಜ್ಜನ್, ಎಸ್ಪಿ ದೇವರಾಜ, ಜಿಪಂ ಸದಸ್ಯ ಬಸನಗೌಡ ದೇಸಾಯಿ ಸೇರಿದಂತೆ ಶಿಗ್ಗಾವಿ ಸವಣೂರ ತಾಲೂಕಿನ ಅಧಿಕಾರಿಗಳು ಹಾಜರಿದ್ದರು.