ಲೋಕದರ್ಶನ ವರದಿ
ಶಿಗ್ಗಾವಿ : ಗ್ರಾಮ ಪಂಚಾಯತಿಯವರು ತಮ್ಮ ಎನ್ಆರ್ಜಿ ಯೋಜನೆಗಳಲ್ಲಿ ಗ್ರಾಮಗಳಲ್ಲಿ ಪಕ್ಕಾ ಗಟಾರಗಳನ್ನು ನಿರ್ಮಾಸಿಕೊಂಡರೆ ಹೆಚ್ಚು ಕಾಂಕ್ರೀಟ್ ರಸ್ತೆಗಳನ್ನು ಮಾಡಲು ಅನೂಕುಲವಾಗುತ್ತದೆ ಆದರೆ ಅಧಿಕಾರಿಗಳು ಈ ವಿಷಯದಲ್ಲಿ ಆಸಕ್ತಿ ತೊರುತ್ತಿಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ವಿಷಾದ ವ್ಯಕ್ತಪಡಿಸಿದರು.
ಬುದವಾರ ತಾಲೂಕಿನ ಖುಷರ್ಾಪೂರ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆಯ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೇರವೆರಿಸಿ ಮಾತನಾಡಿದ ಅವರು ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಸಮಗ್ರ ಅಭಿವದ್ಧಿಯಾಗುತ್ತಿದ್ದು ಎಲ್ಲ ಗ್ರಾಮಗಳಲ್ಲಿ ಸಿಸಿ ರಸ್ತೆಗಳನ್ನು ಮಾಡಲಾಗಿದೆ, ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿದಾಗ ಜನರಿಗೆ ಅನೂಕುಲವಾಗುತ್ತದೆ.
ಗ್ರಾಮಗಳಲ್ಲಿ ಗಟಾರುಗಳ ನಿರ್ಮಾಣ ಕ್ಕೆ ಗ್ರಾಪಂನವರು ಹೆಚ್ಚಿನ ಪ್ರಶಸ್ತ್ಯ ನೀಡಬೇಕು, ಹೊಂದಾಣಿಕೆ ಮತ್ತು ಬುದ್ದಿವಂತಿಕೆಯಿಂದ ಕೆಲಸ ಮಾಡಬೇಕು ಎಂದ ಅವರು ಗ್ರಾಮದಲ್ಲಿ ಶಾಲಾ ಕೊಠಡಿಗೆ ಅನೂದಾನ ನೀಡಲಾಗಿತ್ತು.
ಆದರೆ ಆ ಕಾರ್ಯವಾಗಲಿಲ್ಲ ಈಗ ಮತ್ತೊಮ್ಮೆ ತಮ್ಮ ಅನುದಾನದಿಂದ ಶಾಲಾ ಕೋಠಡಿಯನ್ನು ನಿರ್ಮಾಸಲಾಗುವದು ಮತ್ತು ಕೆರೆಯನ್ನು ತುಂಬಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವದು ಹಾಗೂ ಕೇಂದ್ರ ಸರ್ಕಾರ ರರಿಂದ ಹೆಚ್ಚಿನ ಯೋಜನೆಗಳನ್ನು ತಂದು ಜನತಗೆ ಮುಟ್ಟಿಸುವ ಪ್ರಾಮಾಣಿಕ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದರು.
ಭಾಜಪ ತಾಲೂಕಾ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವಾನಂದ ಮಾಗೇರಿ, ಜಿಪಂ ಸದಸ್ಯೆ ಶೋಭಾ ಗಂಜಿಗಟ್ಟಿ, ತಾಪಂ ಅಧ್ಯಕ್ಷೆ ಪಾರವ್ವ ಆರೇರ್, ಎಪಿಎಮ್ಸಿ ನಿದರ್ೇಶಕ ಮಲ್ಲನಗೌಡ ಪಾಟೀಲ್ ಗ್ರಾಪಂ ಅಧ್ಯಕ್ಷ ರಾಮಣ್ಣ ತೆಳ್ಳಳ್ಳಿ, ಬಸವರಾಜ ವಡ್ಡರ, ಯಲ್ಲಪ್ಪ ವಡ್ಡರ, ಪಾಂಡುರಂಗ ದಂಡಿನ, ನಿಂಗಪ್ಪ ಸೋಲಾರಗೊಪ್ಪ, ಮಾರುತೆಪ್ಪ ಕೋರಿ, ಗಂಗಣ್ಣ ಅಣ್ಣಿಗೇರಿ, ಖಾಸಿಮ್ಸಾಬ ಮೊಹಮ್ಮದಸಾಬನವರ ಸೇರಿದಂತೆ ಗ್ರಾಪಂ ಸದಸ್ಯರು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.