ಲೋಕದರ್ಶನ ವರದಿ
ಶಿಗ್ಗಾವಿ06 : ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನೆಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ನ ಅವರ 131 ನೇ ಜನ್ಮ ದಿನಾಚರಣೆಯ ನಿಮಿತ್ಯ ನೆಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ತಾಲೂಕಿನ ಉತ್ತಮ ಶಿಕ್ಷಕರಿಗೆ ಹಾಗೂ ವಯೋನಿವೃತ್ತಿಯನ್ನು ಹೊಂದಿದ ಶಿಕ್ಷಕರಿಗೆ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಮತ್ತು ಭಾರತ ಸೇವಾ ಸಂಸ್ಥೆಯ ವತಿಯಿಂದ ತಾಲೂಕಿನ ಉತ್ತಮ ಶಿಕ್ಷಕರಿಗೆ ಕನರ್ಾಟಕ ಸರಕಾರದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸನ್ಮಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ ಚಂದ್ರಶೇಖರ ಗಾಳಿ, ಕಾರ್ಯನಿವರ್ಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ ಕೆ.ಎಂ.ಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ತಾ.ಪಂ ಅದ್ಯಕ್ಷೆ ಪಾರವ್ವ ಆರೇರ್, ಎ.ಪಿ.ಎಂ.ಸಿ ಅದ್ಯಕ್ಷೆ ಪ್ರೇಮಾ ಪಾಟೀಲ, ಜಿ.ಪಂ. ಸದಸ್ಯೆ ಶೋಬಾ ಗಂಜಿಗಟ್ಟಿ, ದೀಪಾ ಅತ್ತಿಗೇರಿ, ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಹಾಗೂ ತಾಲೂಕ ಪಂಚಾಯತ ಮತ್ತು ಪಟ್ಟಣ ಪಂಚಾಯತ ಸದಸ್ಯರು ಹಾಜರಿದ್ದರು.