ಬಾಂಬ್ ಬೆದರಿಕೆ : ಚೆನ್ನೈ ವಿಮಾನ ನಿಲ್ದಾಣದಲ್ಲಿ ರೆಡ್ ಅಲರ್ಟ್ ಘೋಷಣೆ

ಚೆನ್ನೈ, ಆಗಸ್ಟ್ 9    ಮಹಿಳಾ ಪ್ರಯಾಣಿಕರೊಬ್ಬರು ಬಾಂಬ್ ನಂತರ ಸ್ಫೋಟಕ ವಸ್ತು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ದೆಹಲಿ ಪೊಲೀಸರ ಮಾಹಿತಿ ಮೇರೆಗೆ ಚೆನ್ನೈ  ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಣೆ  ಮಾಡಲಾಗಿದೆ.  

ದೆಹಲಿ ವಿಮಾನ ನಿಲ್ದಾಣದ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದ ಎಚ್ಚರಿಕೆ ಕರೆಯಲ್ಲಿ   

ಚನ್ನೈನಿಂದ ಸೌದಿ ಅರೆಬಿಯಾಕ್ಕೆ ಹೊರಟಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬಳಿ  

ಸ್ಫೋಟಕ ವಸ್ತು ಇದೆ ಎಂದು ಹೇಳಲಾಗಿತ್ತು. ಈ ಮಾಹಿತಿ ಮೇರೆಗೆ ಎಚ್ಚರಿಕೆ ನೀಡಲಾಗಿದೆ.  

ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ  ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಗುಪ್ತಚರ ಸಂಸ್ಥೆಗಳು  ತುರ್ತ ಸಭೆ ನಡೆಸಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದಾರೆ.  

ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ  ಮಾತ್ರ ಅವಕಾಶ ನೀಡಲಾಗಿದ್ದು  ಸಂದರ್ಶಕರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ವಾಹನ ನಿಲುಗಡೆ ಸ್ಥಳದಲ್ಲೂ ತೀವ್ರ ತಪಾಸಣೆ ನಡೆಸಲಾಗಿದೆ.   

ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಹಾಗೂ ಜಮ್ಮು - ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ  ರದ್ದು ಪಡಿಸಿದ ನಂತರ ಕೆಲವು ಅಹಿತಕರ ಘಟನೆಗಳು ಜರುಗಬಹುದು  ಎಂದು ಕೇಂದ್ರ ಗೃಹ ಸಚಿವಾಲಯವೂ  ಎಚ್ಚರಿಕೆ ನೀಡಿದೆ.