ಮುಂಬೈ, ಜೂ 14, ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ.ಸುಶಾಂತ್ ಬಾಂಡ್ರಾದ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.34 ವರ್ಷದ ಈ ನಟ ಕಾಯ್ ಪೋ ಚೇ! ಚಿತ್ರದಿಂದ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಇತ್ತೀಚಿಗೆ ಅವರು ಚಿಚೋರೆ ಚಿತ್ರದಲ್ಲಿಲ ಕಾಣಿಸಿಕೊಂಡಿದ್ದರು. ಬೆಳ್ಳಿಪರದೆಗೆ ಬರುವ ಮುನ್ನ ಸುಶಾಂತ್ 'ಪವಿತ್ರ ರಿಶ್ತ' ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ನಂತರ ಅವರು ಅಭಿಷೇಕ್ ಕಪೂರ್ ಅವರ ಕಾಯ್ ಪೋ ಚೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಅವರ ರಾತ್ರೋರಾತ್ರಿ ಸ್ಟಾರ್ ನಟರಾಗಿ ಬದಲಾಗಿದ್ದರು. 2013ರ ನಂತರ ಪರಿಣಿತಿ ಚೋಪ್ರಾ ಅವರೊಂದಿಗೆ ಶುದ್ಧ್ ದೇಸಿ ರೋಮ್ಯಾನ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚಿಗೆ ಶ್ರದ್ಧಾ ಕಪೂರ್ ನಟನೆಯ ಚಿಚೋರೆ ಚಿತ್ರದಲ್ಲಿ ನಟಿಸಿದ್ದರು. ಸುಶಾಂತ್ ಅವರಿಗೆ ಹಿಂದೆ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ಕೂಡ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು.