ಗೋವುಗಳನ್ನು ತಂದೆ-ತಾಯಿಯಂತೆ ಜೋಪಾನ ಮಾಡಿ

ಲೋಕದರ್ಶನ ವರದಿ

ಮಾಂಜರಿ 17: ಗೋವುಗಳನ್ನು ತಂದೆ-ತಾಯಿಯಂತೆ ಜೊಪಾನ ಮಾಡಿ, ಗೋವುಗಳಿಗೆ ವಯಸ್ಸಾದೆರೆ ಕಸಾಯಿ ಖಾನೆಗೆ ನೀಡದೆತಮ್ಮ-ತಮ್ಮ ಹೊಲಗಳಲ್ಲಿ ಮಣ್ಣು ಮಾಡಿಎಂದು ನಿಪ್ಪಾಣಿಯ ಶ್ರೀ ಪ್ರಾಣಲಿಂಗ ಮಹಾಸ್ವಾಮಿಜಿಗಳು ಹೇಳಿದರು.

ಅವರುಯಕ್ಸಂಬಾ ಪಟ್ಟಣದಲ್ಲಿನ ಸ್ವಾಮಿ ವಿವೇಕಾನಂದ ಯುವ ಅಭಿವೃದ್ದಿ ಆರ್ಥಿಕ ಸಂಸ್ಥೆಯವರು ಹಮ್ಮಿಕೊಂಡಿದ್ದ 157 ನೇ ಸ್ವಾಮಿ ವಿವೇಕಾನಂದ ಜಯಂತಿ, ಮಕರ ಸಂಕ್ರಮಣೋತ್ಸವ ಹಾಗೂ ವಿವೇಕ ಸೇವಾ ಸನ್ಮಾನ ಹಾಗೂ ವಿವೇಕ ಗೋ ಸೇವಾ ಪರಿವಾರ ಕೇಂದ್ರ ಉದ್ಗಾಟಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರು ತಮ್ಮ-ತಮ್ಮ ಮನೆಯಲ್ಲಿ ಒಂದೂದು ಆಕಳು ಸಾಕಬೇಕು, ಆಕಳುವಿನ ಸಹವಾಸದಿಂದ ಮನಸ್ಸು ಮತ್ತು ಶರೀರ ಶುದ್ಧಿಯಾಗುತ್ತದೆ, ಗೋಸೇವೆ ಮಾಡಿದರೆ ಪೂಣ್ಯ ಬರುತ್ತದೆ. ಆಕಳಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ಭೂಮಿಯಲ್ಲಿ ಆಕಳ ಶಗಣಿ ಮತ್ತು ಮೂತ್ರ ಬಳಸಿನೊಡಿ ಭೂಮಿಯ ಫಲವತ್ತತೆಯೂ ಸಹ ಹೆಚ್ಚಾಗುತ್ತದೆ. ಯಕ್ಸಂಬಾ ಪಟ್ಟಣದಲ್ಲಿ ಗೋಶಾಲೆ ಪ್ರಾರಂಭಿಸಬೇಕುಎಂದು ಹೇಳಿದರು.

ಆರ್.ಎಸ್.ಎಸ್ ಬೆಳಗಾವಿ ವಿಭಾಗದ ಸಹಕಾರ್ಯ ನಿರ್ವಾಹಕ ಸಂಜಯ ಅಡಕೆ ಮಾತನಾಡಿ ಸ್ವಾಮಿ ವಿವೇಕಾನಂದರು ಸನಾತನ ಪರಂಪರೆ, ಸಾಂಸ್ಕೃತಿಕ ಜಗತ್ತು ಮತ್ತು ಆಧ್ಯಾತ್ಮಿಕ ಸಂಪತ್ತನ್ನು ಬದುಕಿಸಿ ಸನ್ಯಾಸಿ ಜೀವನಕ್ಕೊಕ್ಷಾತ್ರ ದೀಕ್ಷೆ ತೊಡಸಿದ ವೀರ ಸನ್ಯಾಸಿ ಅವರು ಪೂರ್ವತ್ಯ ಮತ್ತು ಪಶ್ಚಿಮಾತ್ಯ ಜಗತ್ತಿನ ಸಾಂಸ್ಕೃತಿಕ ಕೊಂಡಿಯಾಗಿದ್ದರು ಎಂದು ಅವರು ಹೇಳಿದರು.

ವಿಶೇಷವಾದ ಸೇವೆಯಿಂದ ಗುರುತಿಸಿಕೊಂಡಿರುವ  ಪಟ್ಟಣದ ಹಿರೀಯ ಮಹಾದೇವ ಮಾನೆಯವರಿಗೆ ಅವರಿಗೆ ಪ್ರಸಕ್ತ ಸಾಲಿನ ವಿವೇಕ ಸೇವಾ ಸನ್ಮಾನ ನೀಡಿ ಗೌರವಿಸಲಾಯಿತು. ಜೊತೆಗೆ ರಾಜು ಬಡಿಗೇರ ಮತ್ತು ಮಾರುತಿ ಪೂಜಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಶಹಾ ವಹಿಸಿ ಮಾತನಾಡಿದರು. ಉಮೇಶ ಸಾತ್ವರ, ಸದಾನಂದ ಹಿರೇಮಠ, ಚಂದ್ರಕಾಂತ ಖೋತ, ಬಸವರಾಜ ಕಲ್ಯಾಣಿ, ಬಾಳಕೃಷ್ಣ ಬಾಕಳೆ, ಪಂಚಾಕ್ಷರಿ ಮಠಪತಿ, ಸುರೇಶ ಹಿರೇಮಠ ಸೇರಿದಂತೆ ಗ್ರಾಮಸ್ಥರು ವಿವೇಕ ಬಳಗದ ಸದಸ್ಯರು ಉಪಸ್ಥಿತರಿದ್ದರು

ಜಕ್ಕಪ್ಪ ಖೋತದೇಶ ಭಕ್ತಿಗೀತೆ ಹಾಡಿದರು. ಭೀಮನ್ನಾ ಹಿಟಣೆ ಸ್ವಾಗತಿಸಿದರು, ಬಾಲಚಂದ್ರ ಬಾಕಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾಜಿ ಗೋಟುರೆ ನಿರೂಪಿಸಿದರು. ಮಹೇಶ ಬಾಕಳೆ ವಂದಿಸಿದರು.