ದೇಹದಾಢ್ರ್ಯ ಸ್ಪರ್ಧೆ: ಯುವ ಸಬಲಿಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಂದ ಚಾಲನೆ

ಲೋಕದರ್ಶನ ವರದಿ

ಕೊಪ್ಪಳ 16: ನಗರದ ಸಾಹಿತ್ಯ ಭವನದಲ್ಲಿ ನಡೆದ ರಾಯಚೂರ, ಬಳ್ಳಾರಿ, ಗದಗ ಮತ್ತು ಕೊಪ್ಪಳ  ಜಿಲ್ಲೆಗಳ ದೇಹದಾಢ್ರ್ಯ ಸ್ಪಧರ್ೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಆರ್.ಜಿ. ನಾಡಗೇರರವರು ಮತ್ತು ಕೊಪ್ಪಳ ಜಿಲ್ಲೆಯ ನಿವೃತ್ತ ಯೋಧರ ಸಂಘದ ಅಧ್ಯಕ್ಷರಾದ ಡಾ. ಬೆಳ್ಳಟ್ಟಿ ರವರಿಂದ ಕಾರ್ಯಕ್ರಮಕ್ಕ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಮ್ರಾನ್ ಪಾಷಾ ಸಮಾಜ ಸೇವಕರು ಬೆಂಗಳೂರು ಮಾತನಾಡಿ ದೇಶದಲ್ಲಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಹಾಗೂ ಸಮಾಜಮುಖಿ ಸೇವೆಯನ್ನು ಮಾಡಬೇಕಾದರೆ ಜೊತೆಗೆ ಸಮಚ್ಚಿತ್ತ ಯೋಚನೆ ಭಾವನೆ ಹೊಂದಬೇಕಾದರೆ ದೈಹಿಕ ದಂಡಣೆನೆಯ ಚಟುವಟಿಕೆ ಇಂದಿನ ಪಿಳಿಗೆಗೆ ಅತಿ ಅವಶ್ಯಕವಾಗಿದೆ ಎಂದರು.

ಯುವಕರು ಈ ದೇಶದ ಸುಭ್ರದತೆಗಾಗಿ ಸದಾ ಒಳ್ಳೆಯ ಕಾರ್ಯಗಳನ್ನು ಮಾಡುವವರಾಗಬೇಕು. ರಾಗ ದೇಶ ಕಲ್ಮಶ ಭಾವನೆ ಇಲ್ಲದೆ ಸಹೋದರತೆ ಭಾವನೆಯೊಂದಿಗೆ ಬದುಕ ಬೇಕಾಗಿದೆ ಎಂದು ಯುವಕರಿಗೆ ಕರೆ ನೀಡಿದರು.ಕೊಪ್ಪಳದ ಜನತೆ ನನ್ನನ್ನು ನಿಮ್ಮ ಜಿಲ್ಲೆಗೆ ಕರೆದು ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವ ಸೂಚಿಸಿದ ಎಲ್ಲ ಸಂಘಕ ಸದಸ್ಯರಿಗೆ ಹಾಗೂ ಹಾಗೂ ಜಿಲ್ಲೆಯ ಜನತೆಗೆ ವಿಶೇಷ ಪ್ರಣಾಮ ಸೂಚಿಸಿದರು.

ಇನ್ನೊರ್ವ ಅತಿಥಿ ಸಮಾಜ ಸೇವಕರು ಬೆಂಗಳೂರು ರಾಕೇಶ ಜೈನ್ ಮಾತನಾಡಿ, ಇಂದಿನ ಪಿಳಿಗೆ ಕೇವಲ ಸಮಾಜಿಕ ಜಾಲತಾಣ ಹಾಗೂ ಗೇಮ್ಗಲ್ಲಿ, ಪಬ್ಜಿ ಎಂದು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಹಾಗೂ ವ್ಯಕ್ತಿತ್ವಕ್ಕೆ ಮಾರಕವಾದುದ್ದು, ಇಂತಹ ಚಟುವಟಿಕೆಯಿಂದ ದೂರ ಉಳಿಯಬೇಕಾದರೆ ಯುವ ಸಮೂಹ ದೈಹಿಕ ಸಮಕ್ಕೆ ಹಾಗೂ ಚಟುವಟಿಕೆಗೆ ಆದ್ಯತೆ ನೀಡಿದರೆ ಇಂತಹ ಕ್ರೀಡಾ ಚಟುವಟಿಕೆ ಅರ್ಥ ಬರುತ್ತದೆ. ಹಾಗೂ ಸಂಘಟಿಕರಿಗೆ ಇದರಿಂದ ಹೆಮ್ಮೆಯನಿಸುತ್ತದೆ. ಯಾವ ಯುವಕರಲ್ಲಿ ದೈಹಿಕ ಕ್ರೀಡೆ ಆಸಕ್ತಿ ಇರುತ್ತದೆ. ಅದು ಅಥ್ಲೇಟಿಕ್ಸ್ ಆಗಿರಬಹುದು, ದೇಹದಾಢ್ರ್ಯ ಚಟುವಟಿಕೆ ಆಸಕ್ತಿ ಇರುತ್ತದೆಯೇ ಅಂತಹ ವ್ಯಕ್ತಿಯ ಮನಸ್ಸು ಹಾಗೂ ವ್ಯಕ್ತಿತ್ವ ಎರಡು ಶುದ್ಧವಾಗಿರುತ್ತದೆ ಇದರಿಂದ ಮನೆ ಹಾಗೂ ಸಮಾಜ ರಾಜ್ಯ ರಾಷ್ಟ್ರಕ್ಕೆ ಗೌರವ ತರಲು ಸ್ಪಂದನೆ ಸಿಗುತ್ತದೆ ಎಂದು ಹೇಳಿದರು.

ನಂತರ ಜಿಲ್ಲೆಯ ನಿವೃತ್ತಿ ಹೊಂದಿದ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಜಿಲ್ಲೆಯ ಕ್ರೀಡಾಪಟುಗಳ ರಾಷ್ಟ್ರೀಯ ಸಾಧನೆಯನ್ನು ಪರಿಗಣಿಸಿ ಕ್ರೀಡಾ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಹಸಿ ಆರ್.ಜಿ. ನಾಡಿಗೇರ ಯುವ ಸಬಲಿಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕಾರ್ಯಕ್ರಮದ ಆಯೋಜನೆ ಕುರಿತು ಹರ್ಷ ವ್ಯಕ್ತಪಡಿಸಿ ಯುವಕರು ದುಶ್ಚಟಗಳಿಂದ ದೂರವಿದ್ದು, ಸಕರ್ಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕ್ರೀಡಾ ಮನೋಭಾವ ಬೆಳಸಿಕೊಳ್ಳಿ ಎಂದು ಕರೆ ನೀಡಿದರು. ನಾಲ್ಕು ಜಿಲ್ಲೆಯಲ್ಲಿ ಬಂದಂತಹ ದೇಹಧಾಡ್ರ್ಯ ಕ್ರೀಡಾ ಸ್ಪಧರ್ಾಗಳು ತಮ್ಮ ಪ್ರತಿಭೆಯನ್ನು ಪ್ರದಶರ್ಿಸಿಸಿದರು. ಇವರಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುಥರ್ಿ ಬಹುಮಾನವನ್ನು ತೀಪರ್ುಗಾರರಾದ ವಿನೋಧ ಅಕ್ಕಿ ಹಾಗೂ ಸಂಘಡಿಗರು ಆಯ್ಕೆ ಮಾಡಿದರು.

ಪ್ರಥಮ ಬಹುಮಾನ ಪಡೆದ ಕ್ರೀಡಾಪಟವಿಗೆ ಗವಿಶ್ರೀ 2019 ಟೈಟಲ್ನ್ನು ನೀಡಲಾಯಿತು. ಜೆಡಿಎಸ್ ಮುಖಂಡ ವಿರೇಶ ಮಹಾಂತ್ಯನಮಠ, ಕಾಂಗ್ರೆಸ್ ಮುಖಂಡರಾದ ಮಾನ್ವಿಪಾಷಾ, ಕಾಟನ್ ಪಾಷಾ, ಡಿ.ಎಸ್.ಎಸ್. ಮುಖಂಡರಾದ ಯಲ್ಲಪ್ಪ ಬಳಗಾನೂರ, ಮಾಜಿ ನಗರಸಭಾ ಸದಸ್ಯ ವಾಯಿದ್ ಸೊಂಪೂರ, ರಮೇಶ ಬೆಲ್ಲದ್, ನಿವೃತ್ತ ಯೋಧರ ಸಂಘಟನೆಯ ಅಧ್ಯಕ್ಷ ಡಾ. ಬೆಳ್ಳಟ್ಟಿ, ಆಯೋಜಕರಾದ ಮೆಹಮೂದ್ ಹುಸೇನಿ ಹಾಗೂ ಹಾಮೀದ್ ಹುಸೇನಿ ಪಾಲ್ಗೊಂಡಿದ್ದರು ಎಂದು ಶ್ರವಣ ಕುಮಾರ ಬಂಡಾನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.