ಧಾರವಾಡ 01: ಧಾರವಾಡ ಬಾಡಿ ಬಿಲ್ಡಿಂಗ್ ಅಸೋಯೇಶಿನ್ ವತಿಯಿಂದ ಹುಬ್ಬಳ್ಳಿಯಲ್ಲಿ ನಡೆದ 19ನೇ ಮಿಸ್ಟರ್ ಹುಬ್ಬಳ್ಳಿ ದೇಹದಾಢ್ಯ ಸ್ಪಧರ್ೆಯಲ್ಲಿ ಕನರ್ಾಟಕ ವಿಶ್ವ ವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಶಾಸ್ತ್ರದ ಸಂಶೋಧನಾ ವಿದ್ಯಾಥರ್ಿಯಾಗಿರುವ ಮಿಲನ್ ಕಾಂಬಳೆ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಸಂಶೋಧನೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಅವರು ಸೈ ಎನಿಸಿಕೊಂಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಸಂಶೋಧನಾ ಕಾರ್ಯಕ್ಕೆಂದು ಚೀನಾಗೆ ತೆರಳಿದ್ದ ಮಿಲನ್ ಚೀನಾದಲ್ಲೂ ಕೂಡ ತಮ್ಮ ಒತ್ತಡದ ಸಂಶೋಧನಾ ಕಾರ್ಯದ ಜೊತೆಯಲ್ಲಿಯೆ ದೇಹದ ಸುಸ್ಥಿತಿಯನ್ನು ಕಾಪಾಡಿಕೊಂಡು ಬಂದಿದ್ದರು.
ರವಿವಾರದಂದು ನಡೆದ ಮಿಸ್ಟರ್ ಹುಬ್ಬಳ್ಳಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಮಿಲನ್ 60 ಕೆ.ಜಿ. ವಿಭಾಗದ ಚಿನ್ನದ ಪದಕವನ್ನು ಮುಡಿಗೆರಿಸಿಕೊಂಡಿದ್ದಾರೆ. ಕಳೆದ ಏಳು ತಿಂಗಳಿನಿಂದ ಸತತವಾಗಿ ನಿಯಮಿತವಾದ ಅಹಾರಾ ಭ್ಯಾಸವನ್ನು ರೂಡಿಸಿಕೊಂಡು ಬಂದಿದ್ದರು. ಕಠಿಣ ಪರಿಶ್ರಮದ ಪ್ರತಿ ಫಲವಾಗಿ ಇಂದು ಈ ಸ್ಪಧರ್ೆಯಲ್ಲಿ ಗೆಲ್ಲುವಂತಾಯಿತು ಎನ್ನುತ್ತಾರೆ ಮಿಲನ್. ಒಟ್ಟಿನಲ್ಲಿ ಸಂಶೋಧಕರು ಎಂದ ತಕ್ಷಣ ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸಿಮೀತವಲ್ಲ ದೇಹ ದಾಡ್ಯಕ್ಕೂ ಸೈ ಎಂದು ಮಿಲನ್ ಅವರು ತಮ್ಮ ಪ್ರತಿಭೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ವಿಭಾಗದ ಮುಖ್ಯಸ್ಥ ಡಾ. ಬಿ.ಎ ವೇದಮೂತರ್ಿ ಮತ್ತು ಮಿಲನ್ ಅವರ ಸಂಶೋಧನಾ ಮಾರ್ಗದರ್ಶಕ ಡಾ. ಸುದೇಶಾ ಜೋಗಯ್ಯ ಮತ್ತು ವಿಭಾಗದ ಶಿಕ್ಷಕ ಸಿಬ್ಬಂದಿ, ವಿದ್ಯಾಥರ್ಿಗಳು ಮಿಲನ್ ಕಾಂಬಳೆ ಅವರನ್ನು ಅಭಿನಂದಿಸಿದ್ದಾರೆ.